ಹುಲಿ ದಾಳಿಗೆ ಕರು ಬಲಿ, ಭಯಭೀತರಾದ ಗ್ರಾಮಸ್ಥರು

ಈ ಸುದ್ದಿಯನ್ನು ಶೇರ್ ಮಾಡಿ

Tigerಬೇಲೂರು, ಜ.12- ಎಸ್ಟೇಟ್‍ನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿ ತಿಂದು ಹಾಕಿರುವ ಘಟನೆ ತಾಲೂಕಿನ ಜಾಕನಹಳ್ಳಿ ಎಸ್ಟೇಟ್‍ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಅರೇಹಳ್ಳಿ ಹೋಬಳಿ ಕೋಗೋಡು ಗ್ರಾಮ ಸಮೀಪದ ಜಾಕನಹಳ್ಳಿ ಕಾಫಿ ಎಸ್ಟೇಟ್‍ನಲ್ಲಿ ಮೇಯಲು ಹೋಗಿದ್ದ ಸಿರಗುರ ಗ್ರಾಮದ ಮೊಗಣ್ಣಗೌಡ ಎಂಬುವರ 30 ಸಾವಿರ ರೂ. ಬೆಲೆ ಬಾಳುವ 6 ವರ್ಷದ ಹಸುವಿನ ಮೇಲೆ ಹಾಡಹಗಲೆ ಹುಲಿಯೊಂದು ದಾಳಿ ನಡೆಸಿ ಶೇ.80 ರಷ್ಟು ತಿಂದು ಹಾಕಿದೆ.

ಹುಲಿ ಹಸುವನ್ನು ತಿಂದಿರುವ ವಿಷಯ ತಿಳಿದ ಈ ಭಾಗದ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಆತಂಕಕ್ಕೊಳಗಾಗಿ ತಮ್ಮ ತೋಟಗಳತ್ತ ಕೆಲಸ-ಕಾರ್ಯಕ್ಕೆ ತೆರಳಲು ಭಯಪಡುತಿದ್ದಾರೆ.

ಈ ಘಟನೆ ಬಗ್ಗೆ ಅರಣ್ಯ ಇಲಾಖೆಯವರಿಗೆ ತಿಳಿಸಿದ್ದರೂ ಇಲ್ಲಿವರೆಗೂ ಸ್ಥಳಕ್ಕಾಗಮಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.  ಗ್ರಾಮದ ಸಮೀಪ ಹುಲಿ ಸಂಚರಿಸಿರುವುದನ್ನು ಕೆಲವರು ಕಣ್ಣಾರೆ ನೋಡಿದ್ದಾರೆ. ಈ ಹುಲಿಯೂ ಹಲವಾರು ದಿನಗಳಿಂದ ಸಿರಗುರ, ಕೊಗೋಡು, ಜಾಕನಹಳ್ಳಿ ಭಾಗದಲ್ಲಿ ಓಡಾಡಿರುವ ಹೆಜ್ಜೆ ಗುರುತುಗಳು ಕಾಣಬಹುದಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಹುಲಿಯನ್ನಿಡಿದು ಗ್ರಾಮಸ್ಥರ ಆತಂಕ ದೂರ ಮಾಡಬೇಕು ಎಂದು ಕೊಗೋಡು ದೀಕ್ಷಿತ್ ಮನವಿ ಮಾಡಿದ್ದಾರೆ.

Facebook Comments