ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಿದ ಅಮೇರಿಕಾದ ಸಂಸದ

ಈ ಸುದ್ದಿಯನ್ನು ಶೇರ್ ಮಾಡಿ

u sವಾಷಿಂಗ್ಟನ್, ಜ.12 (ಪಿಟಿಐ)- ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ(ನ್ಯಾಟೋ)ಯ ಸದಸ್ಯೇತರ ಪ್ರಮುಖ ಮಿತ್ರರಾಷ್ಟ್ರ ಎಂಬ ಪಾಕಿಸ್ತಾನದ ಸ್ಥಾನಮಾನವನ್ನು ರದ್ದುಗೊಳಿಸುವಂತೆ ಕೋರಿ ಅಮೆರಿಕದ ಪ್ರಭಾವಿ ಸಂಸದರೊಬ್ಬರು ಸಂಸತ್‍ನಲ್ಲಿ ಮಸೂದೆಯೊಂದನ್ನು ಮಂಡಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಇತ್ತೀಚೆಗೆ ಅಮೆರಿಕ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ಇಸ್ಲಾಮಾಬಾದ್‍ಗೆ ಮತ್ತೊಂದು ಭಾರೀ ಹಿನ್ನಡೆಯಾಗಲಿದೆ.

ಪಾಕಿಸ್ತಾನವು ಭಯೋತ್ಪಾದನೆ ಸಂಘಟನೆಗಳ ನಿಗ್ರಹದಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಕಾಂಗ್ರೆಸ್ ಸದಸ್ಯರ ಆಂಡಿ ಬ್ರಿಗ್ಸ್ ಅವರು ಹೌಸ್ ಆಫ್ ರೆಪ್ರಸೆಂಟೇಟೀವ್ಸ್‍ನಲ್ಲಿ ಈ ಸಂಬಂಧ ನಿರ್ಣಯ-73 ಮಂಡಿಸಿದ್ದಾರೆ.

ನ್ಯಾಟೋದ ಸದಸ್ಯೇತರ ಪ್ರಮುಖ ಮಿತ್ರರಾಷ್ಟ್ರ ಎಂಬ ಪಾಕಿಸ್ತಾನದ ಸ್ಥಾನಮಾನದಿಂದ ಪಾಕಿಸ್ತಾನವನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿರುವ ಆಂಡಿ ಒಂದು ವೇಳೆ ಪಾಕಿಸ್ತಾನವನ್ನು ಮರು ಸೇರ್ಪಡೆ ಮಾಡಿಕೊಳ್ಳಲೇಬೇಕಾದರೆ ಕೆಲವು ಷರತ್ತುಗಳನ್ನು ಪಾಲಿಸಬೇಕೆಂದು ಆಗ್ರಹಿಸಿದ್ದಾರೆ. ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್(ನ್ಯಾಟ್) ಉತ್ತರ ಅಮೆರಿಕ ಮತ್ತು ಯುರೋಪ್‍ನ 29 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.

Facebook Comments