ಓಡಿಶಾ ಕಡಲತೀರದಲ್ಲಿ ದೈತ್ಯಾಕಾರ ತಿಮಿಂಗಿಲದ ಮೃತದೇಹ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Odisha--01
ಕೇಂದ್ರಪಾದ, ಜ.12-ಓಡಿಶಾದ ಕೇಂದ್ರಪಾದ ಜಿಲ್ಲೆಯ ಸಮುದ್ರ ತೀರದಲ್ಲಿ 40 ಅಡಿ ಉದ್ದದ ಭಾರೀ ತಿಮಿಂಗಿಲವೊಂದರ ಮೃತದೇಹ ನಿನ್ನೆ ಪತ್ತೆಯಾಗಿದೆ. ಈ ಸಮುದ್ರ ಸಸ್ತನಿಯು 12 ಟನ್ನುಗಳಷ್ಟು ತೂಕ ಹೊಂದಿದೆ.

ಕೇಂದ್ರಪಾದದಲ್ಲಿನ ಗಹಿರ್‍ಮಾತಾ ಸಾಗರ ಜೀವಿಗಳ ಧಾಮದ ಬಳಿ ಕಡಲ ಕಿನಾರೆಗೆ ಈ ತಿಮಿಂಗಿಲ ಕೊಚ್ಚಿಕೊಂಡು ಬಂದು ಸತ್ತು ಬಿದ್ದಿದೆ ಎಂದು ಅರಣ್ಯಾಧಿಕಾರಿ ಸುಬ್ರತ್ ಪಾತ್ರ ಹೇಳಿದ್ದಾರೆ.

ತಲ್‍ಚುವಾ ಕರಾವಳಿ ತೀರದಲ್ಲಿ ಬಿದ್ದಿರುವ ಈ ತಿಮಿಂಗಿಲದ ಮೃತದೇಹವನ್ನು ತೆರವುಗೊಳಿಸಲು ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಇದಕ್ಕಾಗಿ ಭಾರೀ ಸಾಮಥ್ರ್ಯದ ಕ್ರೇನ್ ಮತ್ತು ಇತರ ಸಾಧನಗಳನ್ನು ಬಳಸಲಾಗಿದೆ.

ಗರ್ಗುನ್‍ಟಾನ್ ಪ್ರಭೇದದ ಈ ತಿಮಿಂಗಲಗಳು ಅವನತಿಯ ಅಂಚಿನಲ್ಲಿವೆ.
2016 ಫೆಬ್ರವರಿಯಲ್ಲಿ ಓಡಿಶಾ ಕರಾವಳಿ ತೀರಕ್ಕೆ 33 ಅಡಿಗಳಷ್ಟು ಉದ್ದದ ಧ್ಯೈತ್ಯಾಕಾರದ ತಿಮಿಂಗಿಲವೊಂದರ ಶವ ಪತ್ತೆಯಾಗಿತ್ತು.

Facebook Comments

Sri Raghav

Admin