ಪಾಕ್ ಗೆ ‘ಜಲ’ ದಿಗ್ಭಂದನ ಹಾಕಲು ಮುಂದಾದ ಭಾರತ..!

ಈ ಸುದ್ದಿಯನ್ನು ಶೇರ್ ಮಾಡಿ

Nitin Gadkariನವದೆಹಲಿ, ಜ.12 – ಸಿಂಧು ಜಲ ಒಪ್ಪಂದದ ಅಡಿ ಭಾರತದಿಂದ ಪಾಕಿಸ್ತಾನಕ್ಕೆ ಮಂಜೂರಾಗಿದ್ದ ಬಳಕೆಯಾಗದ ನೀರನ್ನು ನಿಲ್ಲಿಸಲು ಕೇಂದ್ರ ಸರ್ಕಾರ ವಿಶೇಷ ಗಮನ ನೀಡಿದೆ ಎಂದು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಯಮುನಾ ಮೇಲ್ದಂಡೆಯಲ್ಲಿ ರೇಣುಕಾಜಿ ಬಹು-ಉದ್ದೇಶಿತ ಅಣೆಕಟ್ಟು ಯೋಜನೆಯ ನಿರ್ಮಾಣಕ್ಕಾಗಿ ಆರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ದೆಹಲಿಯಲ್ಲಿ ತಿಳುವಳಿಕೆ ಒಪ್ಪಂದ ಪತ್ರ(ಎಂಒಯು)ಕ್ಕೆ ಸಹಿ ಹಾಕಿದ ನಂತರ ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ದಿ ಮತ್ತು ಗಂಗಾ ಪುನ:ಶ್ಚೇತನ ಸಚಿವ ನಿತಿನ್ ಗಡ್ಕರಿ ಈ ವಿಷಯ ತಿಳಿಸಿದರು.

ಈ ಮಹತ್ವದ ಒಪ್ಪಂದಕ್ಕೆ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ(ಉತ್ತರ ಪ್ರದೇಶ), ಅಶೋಕ್ ಗೆಲ್ಹೋಟ್(ರಾಜಸ್ತಾನ), ತೀವೇಂದ್ರ ಸಿಂಗ್ ರಾವತ್(ಉತ್ತರಾಖಂಡ್), ಮನೋಹರ್ ಲಾಲ್ ಖಟ್ಟರ್(ಹರ್ಯಾಣ), ಅರವಿಂದ್ ಕೇಜ್ರಿವಾಲ್(ದೆಹಲಿ) ಹಾಗೂ ಜೈರಾಮ್ ಥಾಕೂರ್(ಹಿಮಾಚಲ ಪ್ರದೇಶ) ಅವರೊಂದಿಗೆ ಈ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಮಾಡಿದೆ.

ಅಲ್ಲದೇ, ಗಂಗಾ ಶುದ್ಧೀಕರಣದ ರಾಷ್ಟ್ರೀಯ ಯೋಜನೆ, ಉತ್ತರಪ್ರದೇಶ ಜಲ ನಿಗಮ ಹಾಗೂ ಪ್ರಯಾಗ್ ವಾಟರ್ ಪ್ರೈವೇಟ್ ಲಿಮಿಟೆಡ್ ಈ ಸಂಸ್ಥೆಗಳಿಗೆ ಅಲಹಾಬಾದ್‍ನಲ್ಲಿ ನಮಾಮಿ ಗಂಗೆ ಯೋಜನೆಗಳ ಒಪ್ಪಂದಗಳಿಗೂ ಸಹ ಸಹಿ ಹಾಕಲಾಗಿದೆ.ನಮ್ಮ ದೇಶದಲ್ಲಿ ಯಥೇಚ್ಚ ಪ್ರಮಾಣದಲ್ಲಿ ನೀರು ಲಭ್ಯವಿದೆ. ಆದರೆ ಇದನ್ನು ಸದ್ಬಳಕೆ ಮಾಡಿಕೊಳ್ಳಲು ಪರಿಣಾಮಕಾರಿ ನಿರ್ವಹಣೆಯದ್ದೇ ವಾಸ್ತವ ಸಮಸ್ಯೆ ಎಂದು ಸಚಿವ ಗಡ್ಕರಿ ಹೇಳಿದರು.

ನಾನು ಈಗ ಒಂದು ಕ್ರಮ ಕೈಗೊಂಡಿದ್ದೇವೆ. ಸಿಂಧು ನದಿ ನೀರು ಹಂಚಿಕೆ ಒಪ್ಪಂದದ ಅಡಿ ಭಾರತರ ಪಾಲಿಗೆ ದಕ್ಕಿರುವ ನದಿ ನೀರಿನ ಬಳಕೆಯಲ್ಲಿನ ನಮ್ಮ ಪಾಲು ಪಾಕಿಸ್ತಾನಕ್ಕೆ ಹೋಗುತ್ತಿದೆ. ಅಧಿಕ ನೀರು ಪಾಕಿಸ್ತಾನಕ್ಕೆ ಹೋಗುವುದನ್ನು ನಾನು ತಡೆಯಬೇಕಿದೆ. ಅದನ್ನು ಪಂಜಾ ಬ್, ಹರ್ಯಾಣ, ಉತ್ತರಪ್ರದೇಶ, ರಾಜಸ್ತಾನ ಮತ್ತು ದೆಹಲಿಗೆ ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಸಿಂಧು ಜಲ ಒಪ್ಪಂದದ ಅಡಿ ಸಿಂಧು ನದಿಯ ಮೂರು ಉಪ ನದಿಗಳಾದ ಸಟ್ಜೇಜ್, ಬಿಯಾಸ್ ಮತ್ತು ರವಿ ಇವುಗಳ ನೀರು ಹಂಚಿಕೆ ಭಾರತಕ್ಕೆ ಲಭಿಸಿದೆ. ಚೆನಾಬ್, ಜೇಲಂ ಮತ್ತು ಸಿಂಧು ನದಿಗಳ ನೀರನ್ನು ಬಳಸಲು ಪಾಕಿಸ್ತಾನಕ್ಕೆ ಒಪ್ಪಂದದ ಅಡಿ ಅವಕಾಶವಿದೆ ಎಂದು ಸಚಿವರು ವಿವರಿಸಿದರು.

ಒಟ್ಟು 168 ದಶಲಕ್ಷ ಎಕರೆ ಅಡಿಯಲ್ಲಿ ಭಾರತಕ್ಕೆ ಮೂರು ನದಿಗಳಿಂದ 33 ದಶಲಕ್ಷ ಎಕರೆ ಅಡಿಗಳಷ್ಟು ನೀರು ಹಂಚಿಕೆಯಾಗಿದೆ. ಭಾರತವು ಸಿಂಧು ಜನರ ಒಪ್ಪಂದದ ಅಡಿ ತಮ್ಮ ಪಾಲಿನಲ್ಲಿ ಶೇ.93ರಷ್ಟು ಪಾಲನ್ನು ಬಳಸಿಕೊಳ್ಳುತ್ತಿದೆ. ಉಪಯೋಗಿಸಲಾದ ಉಳಿದ ಪಾಲು ಪಾಕಿಸ್ತಾನಕ್ಕೆ ಹೋಗುತ್ತಿದೆ. ಇದನ್ನು ತಡೆಗಟ್ಟಿ ಅದನ್ನು ನಮ್ಮ ದೇಶದ ವಿವಿಧ ರಾಜ್ಯಗಳಿಗೆ ಉಪಯೋಗಿಸಲು ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

Facebook Comments