ಮಹಡಿಯಿಂದ ಬಿದ್ದು ವ್ಯಕ್ತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

dethieಬೆಂಗಳೂರು,ಜ.12- ಕಟ್ಟಡವೊಂದರ 6ನೇ ಮಹಡಿಯಿಂದ ಬಿದ್ದು ಚಿತ್ರದುರ್ಗದ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವಿಲ್ಸನ್‍ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ ನಿವಾಸಿ ನಾಗೇಶ್(35) ಸಾವನ್ನಪ್ಪಿರುವ ವ್ಯಕ್ತಿ. ಗಾರೆಕೆಲಸ ಮಾಡುತ್ತಿದ್ದ ಈತ ಪ್ರತಿನಿತ್ಯ ಅತ್ತಿಬೆಲೆ-ಚಂದಪುರ ಸೇರಿದಂತೆ ವಿವಿಧ ಕಡೆ ಗಾರೆಕೆಲಸ ಮಾಡಿಕೊಂಡು ಬಂದು ಶಾಂತಿನಗರ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದರು.

ಇಂದು ಬೆಳಗಿನ ಜಾವ 2.30ರ ಸುಮಾರಿನಲ್ಲಿ ಶಾಂತಿನಗರ ಸಮೀಪದ ಸ್ವಾತಿ ಡೀಲಕ್ಸ್ ಹೋಟೆಲ್ ಬಳಿಯ ಬಹುಮಹಡಿ ಕಟ್ಟಡದ 6ನೇ ಮಹಡಿಯಿಂದ ಬಿದ್ದು ಇವರು ಮೃತಪಟ್ಟಿದ್ದಾರೆ.  ಸುದ್ದಿ ತಿಳಿದ ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಈ ವ್ಯಕ್ತಿ ಕಾಲುಜಾರಿ ಬಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Facebook Comments