ನಿಮಿಷಾಂಬ ದೇಗುಲದಲ್ಲಿ ವಿದೇಶಿ ಕರೆನ್ಸಿ ಸೇರಿ 39 ಲಕ್ಷ ಕಾಣಿಕೆ ಸಂಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

nimamba templeಮಂಡ್ಯ, ಜ.12-ಶ್ರೀರಂಗಪಟ್ಟಣದ ಪ್ರಸಿದ್ಧ ಯಾತ್ರಾ ಸ್ಥಳ ಗಂಜಾಂನ ನಿಮಿಷಾಂಬ ದೇವಾಲಯದಲ್ಲಿ ಧನುರ್ಮಾಸದ ವಿಶೇಷ ಪೂಜೆ ಸಂದರ್ಭದಲ್ಲಿ ಭಕ್ತರು ಹುಂಡಿಗೆ ಹಾಕಿದ್ದ ಕಾಣಿಕೆಯ ಎಣಿಕೆ ಕಾರ್ಯ ನಡೆದಿದ್ದು, ಚಿನ್ನ-ಬೆಳ್ಳಿ, ವಿದೇಶಿ ಕರೆನ್ಸಿಗಳು ಸೇರಿದಂತೆ ಅಮಾನ್ಯಗೊಂಡಿರುವ ನೋಟುಗಳು ಕೂಡ ಪತ್ತೆಯಾಗಿವೆ.

ಸುಮಾರು 39,77,922 ರೂ.ನಗದು ಹಣ, 130 ಗ್ರಾಂ ಚಿನ್ನ, 665 ಗ್ರಾಂ ಬೆಳ್ಳಿ ಆಭರಣಗಳು ಕೂಡ ಹುಂಡಿಯಲ್ಲಿತ್ತು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಇದರ ನಡುವೆ ಅಮಾನ್ಯಗೊಂಡಿರುವ 500ರೂ. ಮುಖಬೆಲೆಯ 6 ಸಾವಿರ ರೂ. ಹಾಗೂ ಒಂದು ಸಾವಿರ ಮುಖಬೆಲೆಯ 3 ನೋಟುಗಳು ಪತ್ತೆಯಾಗಿವೆ.
33 ಅಮೆರಿಕನ್ ಡಾಲರ್, 100 ಓಮನ್ ದೇಶದ ಕರೆನ್ಸಿ, 3 ಮಲೇಷ್ಯಾ, ಸಿಂಗಾಪುರ ಹಾಗೂ ಇತರೆ ದೇಶಗಳ ವಿದೇಶಿ ಕರೆನ್ಸಿಗಳು ಕೂಡ ಹುಂಡಿಯಲ್ಲಿದ್ದವು ಎಂದು ತಿಳಿಸಿದ್ದಾರೆ.

Facebook Comments