500ಸಿಸಿಗಿಂತ ಹೆಚ್ಚಿನ ಇಂಜಿನ್ ಹೊಂದಿದ ಬೈಕ್ ಮಾಲೀಕರಿಗೆ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

Bike--01

ಮುಂಬೈ. ಜ.12 : ವಿಕೆಂಡ್ ಬಂದರೆ ಸಾಕು ಅಬ್ಬರಿಸಿ ಬೊಬ್ಬಿರಿಯುವ ಬೈಕ್ ಗಳ ಸೌಂಡ್ ನಿಂದ ಬೇಸತ್ತ ಮುಂಬೈ ನಿವಾಸಿಗಳು ಪೊಲೀಸರ ಮೊರೆ ಹೋಗಿದ್ದಾರೆ.  ಹೌದು, ವಿಕೆಂಡ್ ಬಂದ್ರೆ ಸಾಕು ಈ ಗೋಳು ಇನ್ನು ಜಾಸ್ತಿಯಾಗುತ್ತೆ. ಈ ಬೈಕ್‍ಗಳಿಂದ ವಾರವಿಡೀ ಕೆಲಸ ಮಾಡಿ ಸುಸ್ತಾಗಿರೋ ಜನರಿಗೆ ರಜೆ ಸಿಕ್ಕರು ನೆಮ್ಮದಿಯಿಲ್ಲ. ರಜಾ ದಿನಗಳಲ್ಲಿ ಬೈಕ್ ಓಡಾಟ ಹೆಚ್ಚಾಗಿರುವುದರಿಂದ ಪೊಲೀಸರಿಗೆ 10 ರಿಂದ 15 ಕರೆಗಳು ಬರುತ್ತಿದೆ.

ಆದ್ದರಿಂದ ನವಿ ಮುಂಬೈನ ಪಾಮ್ ಬೀಚ್ ಬಳಿಯ ನಿವಾಸಿಗಳ ದೂರಿನ ಆಧಾರದ ಮೇಲೆ ಪೊಲೀಸರು 500 ಸಿಸಿಗಿಂತ ಹೆಚ್ಚಿನ ಇಂಜಿನ್ ಹೊಂದಿದ ಬೈಕ್ ಮಾಲೀಕರಿಗೆ ನೊಟೀಸ್ ನೀಡಿದ್ದಾರೆ.

ಪಾಮ್ ಬೀಚ್ ಪ್ರದೇಶದಲ್ಲಿ ವಿಕೆಂಡ್ ಬಂತು ಅಂದ್ರೆ 500 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಸಿಸಿ ಬೈಕ್‍ಗಳ ಅಬ್ಬರ ಜೋರಾಗಿರುತ್ತೆ. ಅದರಲ್ಲೂ ರಾತ್ರಿ ವೇಳೆ ಇದರ ಆರ್ಭಟ ಹೆಚ್ಚು.

ಈ ಬೈಕ್‍ಗಳ ಶಬ್ದದಿಂದ ಬೇಸತ್ತಿರುವ ಪಾಮ್ ಬೀಚ್ ಪ್ರದೇಶದ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದರು. ಆದರಿಂದ ವಿಕೆಂಡ್ ವೇಳೆ ಪೊಲೀಸರು ನಿಯಮ ಉಲ್ಲಂಘಿಸುವವರನ್ನ ಹಿಡಿಯಲು ಪ್ಲಾನ್ ಮಾಡಿದ್ದರು.

ಅಷ್ಟೇ ಅಲ್ಲದೆ ಪಾಮ್ ಬೀಚ್ ಬಳಿ ಸ್ಪೀಡ್ ಟ್ರಾಕರ್ ಹಾಗೂ ಸಿಸಿಟಿವಿ ಅಳವಡಿಸಲಾಗಿದ್ದು, ರೂಲ್ಸ್ ಬ್ರೇಕ್ ಮಾಡುವ ಬೈಕ್ ರೈಡರ್ಸ್ ಗೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಹಾಗೆಯೇ ಈಗಾಗಲೇ ನೊಟೀಸ್ ನೀಡಿದವರ ಬೈಕ್ ಮಾಲೀಕರು ನಿಯಮ ಮೀರಿದರೆ ಅವರ ಲೈಸೆನ್ಸ್ ರದ್ದುಗೊಳಿಸಲಾಗುವುದು ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin