‘ಕಳೆದ ನಾಲ್ಕೂವರೆ ವರ್ಷಗಳಿಂದ ಭಾರತದಲ್ಲಿ ಅಸಹನೆ, ದ್ವೇಷ ತಾಂಡವ ವಾಡುತ್ತಿದೆ’

ಈ ಸುದ್ದಿಯನ್ನು ಶೇರ್ ಮಾಡಿ

rahulದುಬೈ, ಜ.12- ಕಳೆದ ನಾಲ್ಕೂವರೆ ವರ್ಷಗಳಿಂದ ಭಾರತದಲ್ಲಿ ಅಸಹನೆ ಮತ್ತು ದ್ವೇಷ ತಾಂಡವವಾಡುತ್ತಿದೆ. ಇದು ಜನರ ಮನಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ಕ್ಕೆ ಎರಡು ದಿನಗಳ ಭೇಟಿ ನೀಡಿರುವ ರಾಹುಲ್ ಇಂದು ದುಬೈನ ಐಎಂಟಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಮಾತನಾಡಿದರು. ತಮ್ಮ ಭಾಷಣದಲ್ಲಿ ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಭಾರತದಲ್ಲಿ ನಿರುದ್ಯೋಗ, ಬಡತನ ಹೆಚ್ಚಾಗಿದೆ.

ಮೋದಿ ಸರ್ಕಾರದಿಂದ ನಿರೀಕ್ಷಿತ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಟೀಕಿಸಿದರು. ಭಾರತವು ಚಿಂತನೆಗಳನ್ನು ರೂಪಿಸುತ್ತಿದೆ. ಅದೇ ರೀತಿ ಚಿಂತನೆಯು ಭಾರತವನ್ನು ರೂಪಿಸುತ್ತಿದೆ ಎಂದು ಭಾರತದ ಭವ್ಯ ಸಂಸ್ಕøತಿ ಮತ್ತು ಪರಂಪರೆಗಳನ್ನು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.

“ಅಮಾನ್ಯೀಕರಣ ಮತ್ತು ಜಿಎಸ್‍ಟಿಯಿಂದ ಭಾರತ ಬಹಳಷ್ಟು ಬಾಧಿತವಾಗಿದೆ. ಉದ್ಯೋಗಗಳ ಸೃಷ್ಟಿ ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ, ನಾವು ಚೀನಾವನ್ನು ಈ ನಿಟ್ಟಿನಲ್ಲಿ ಸೋಲಿಸಬಹುದಾಗಿದೆ. ನಮ್ಮ ರೈತರು ಸಮಸ್ಯೆಯಲ್ಲಿದ್ದಾರೆ. ನಮಗೆ ಎರಡನೇ ಹಸಿರು ಕ್ರಾಂತಿಯ ಅಗತ್ಯವಿದೆ” ಎಂದರು.

“ನೀವು ದುಬೈಗೆ ಬಂದರೂ ನಿಮ್ಮ ಹೃದಯಲ್ಲಿ ಭಾರತ ನೆಲೆಸಿರುತ್ತದೆ. ನನ್ನ ಕೊನೆಯುಸಿರಿರುವ ತನಕವೂ ನನ್ನ ಬಾಗಿಲು, ಹೃದಯ ಮತ್ತು ಕಿವಿಗಳು ನಿಮಗಾಗಿ ತೆರೆದಿರುತ್ತವೆ” ಎಂದು ರಾಹುಲ್ ಭಾವೋದ್ವೇಗದಿಂದ ಹೇಳಿದರು.

“ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಭಾರತೀಯ ಉದ್ಯೋಗಿಗಳು ಆ ದೇಶದ ಅಭಿವೃದ್ಧಿಗಾಗಿ ತಮ್ಮ ಬೆವರು ಹರಿಸಿದ್ದಾರೆ ಹಾಗೂ ಭಾರತಕ್ಕೆ ಹೆಮ್ಮೆಯುಂಟು ಮಾಡಿದ್ದಾರೆ. ನೀವು ಈ ದೇಶ ಕಟ್ಟಲು ಸಹಕರಿಸಿದ್ದೀರಿ” ಎಂದರು.  “ನನ್ನ ಪ್ರೀತಿಯ ಭಾರತವನ್ನು ಧರ್ಮ, ಜಾತಿ, ಶ್ರೀಮಂತ, ಬಡವ ಎಂಬ ಬೇಧಭಾವದಿಂದ ಹೋಳಾಗಿಸಲಾಗುತ್ತಿದೆ” ಎಂದು ಅವರು ಖೇದ ವ್ಯಕ್ತಪಡಿಸಿದರು.

Facebook Comments