2020ರಲ್ಲಿ ಟ್ರಂಪ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ಪ್ರಥಮ ಹಿಂದು ಸಂಸದೆ ತುಳಸಿ..!

ಈ ಸುದ್ದಿಯನ್ನು ಶೇರ್ ಮಾಡಿ

Tulsi--1

ವಾಷಿಂಗ್ಟನ್, ಜ.12- ಅಮೆರಿಕ ಕಾಂಗ್ರೆಸ್‍ನಲ್ಲಿ ಪ್ರಥಮ ಹಿಂದು ಸಂಸದೆ ಎಂದೇ ಗುರುತಿಸಲ್ಪಟ್ಟಿರುವ ತುಳಸಿ ಗಬ್ಬಾರ್ಡ್ 2020ರ ಸಾರ್ವತ್ರಿಕ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸೆಣಸಲಿದ್ದಾರೆ.

ಈ ಮೂಲಕ ಶ್ವೇತಭವನ ಪ್ರವೇಶಿಸಲು ಈಗಿನಿಂದಲೇ ತುಳಸಿ ಪೂರ್ವ ತಯಾರಿ ನಡೆಸುತ್ತಿದ್ದಾರೆ. 37 ವರ್ಷದ ತುಳಸಿ, ಡೆಮೊಕ್ರಾಟಿಕ್ ಪಕ್ಷದಿಂದ ಅಧ್ಯಕ್ಷಗಾದಿಗಾಗಿ ಸ್ಪರ್ಧಿಸುತ್ತಿದ್ದಾರೆ. ಸೆನೆಟರ್ ಎಲಿಜಬೆತ್ ವಾರೆನ್ ನಂತರ ಈ ಪಕ್ಷದಿಂದ ಅಮೆರಿದ ಅತ್ಯುನ್ನತ ಸ್ಥಾನಕ್ಕಾಗಿ ಕಣದಲ್ಲಿರುವ ಎರಡನೇ ಮಹಿಳೆಯಾಗಿದ್ದಾರೆ.

2020ರಲ್ಲಿ ಟ್ರಂಪ್ ವಿರುದ್ಧ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ಕ್ಯಾಲಿಫೋರ್ನಿಯಾದ ಸಂಸದೆ ಭಾರತೀಯ ಮೂಲಕದ ಕಮಲಾ ಹ್ಯಾರಿಸ್ ಸೇರಿದಂತೆ ಡೆಮೊಕ್ರಾಟಿಕ್ ಪಕ್ಷದ 12ಕ್ಕೂ ಹೆಚ್ಚು ನಾಯಕರು ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.

ಹವಾಯಿ ಕ್ಷೇತ್ರದಿಂದ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್‍ನಲ್ಲಿ ನಾಲ್ಕು ಬಾರಿ ಡೆಮೊಕ್ರಾಟಿಕ್ ಸಂಸದೆಯಾಗಿರುವ ತುಳಸಿ ಅತ್ಯಂತ ಪ್ರಭಾವಿ ಮಹಿಳಾ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಬದುಕಿನ ಆರಂಭದಲ್ಲೇ ಹಿಂದು ಧರ್ಮಕ್ಕೆ ಮತಾಂತರಗೊಂಡ ತುಳಸಿ ಗಬ್ಬಾರ್ಡ್ ಅಮೆರಿಕ ಮೂಲದ ಭಾರತೀಯರಲ್ಲಿ ಅತ್ಯಂತ ಜನಪ್ರಿಯತೆ ಪಡೆದಿದ್ದಾರೆ.

ನಾನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸಲು ನಿರ್ಧರಿಸಿದ್ದೇನೆ. ಈ ಬಗ್ಗೆ ಮುಂದಿನ ವಾರ ಅಧಕೃತ ಘೋಷಣೆ ಹೊರಡಿಸುತ್ತೇವೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin