ಸಿಂಪಲ್ ಮೋದಿ – ರಾಯಲ್ ರಾಹುಲ್ : ಬಿಜೆಪಿ ಪೋಸ್ಟ್ ಮಾಡಿದ ಫೋಟೋ ವೈರಲ್

ಈ ಸುದ್ದಿಯನ್ನು ಶೇರ್ ಮಾಡಿ

modiಬೆಂಗಳೂರು, ಜ.12- ರಾಜ್ಯ ಬಿಜೆಪಿ ಘಟಕವು ಟ್ವಟರ್‍ನಲ್ಲಿ ಪೋಸ್ಟ್ ಮಾಡಿರುವ ಪೋಟೋ ಒಂದು ಗಮನಸೆಳೆಯುತ್ತಿದೆ. ಈ ಪೋಟೋದಲ್ಲಿ ಸಂಯುಕ್ತ ಅರಬ್ ಗಣರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಭೇಟಿ ನೀಡಿದಾಗ ಕಂಡುಬಂದ ಚಿತ್ರಗಳನ್ನು ಹೋಲಿಸಲಾಗಿದೆ.

ಈ ಚಿತ್ರದಲ್ಲಿ ರಾಹುಲ್ ಯುಎಇಗೆ ನೀಡಿದ ಎರಡು ದಿನಗಳ ಭೇಟಿ ವೇಳೆ. ಕೊಲ್ಲಿ ರಾಷ್ಟ್ರದ ಅನಿವಾಸಿ ಭಾರತೀಯರು ಮತ್ತು ದೊಡ್ಡ ಉದ್ಯಮಿಗಳೊಂದಿಗೆ ಅತ್ಯಂತ ದುಬಾರಿ ಔತಣ ಕೂಟದಲ್ಲಿ ಪಾಲ್ಗೊಂಡು ಭರ್ಜರಿ ಮೇಜುವಾನಿ ನಡೆಸುತ್ತಿದ್ದಾರೆ.

ಇನ್ನೊಂದು ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಕಾರ್ಮಿಕರರನ್ನು ಭೇಟಿ ಮಾಡಿ, ಅವರೊಂದಿಗೆ ಆತ್ಮೀಯವಾಗಿ ಬೆರೆತು ತೀರಾ ಸಾಮಾನ್ಯ ಪೊಟ್ಟಣದ ಆಹಾರವನ್ನು ನೌಕರರೊಂದಿಗೆ ಸೇವಿಸುತ್ತಿರುವ ಚಿತ್ರವಿದೆ.

ಈ ಪೋಟೊವನ್ನು ರಾಜ್ಯ ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ದುಬೈ ಭೇಟಿ ವೇಳೆ ಮೋದಿ ಸರಳ ಸೌಜನ್ಯತೆ V/s ರಾಹುಲ್ ಐಷಾರಾಮಿ ವಿಲಾಸ ಎಂಬರ್ಥದಲ್ಲಿ ತುಲನೆ ಮಾಡಿದೆ.

BJP-Phoitros

Facebook Comments