ಅಂಬಿ ನುಡಿನಮನ ಕಾರ್ಯಕ್ರಮದಲ್ಲಿ ದಿನೇಶ್‍ಗುಂಡೂರಾವ್ ಹೇಳಿದ್ದೇನು…?

ಈ ಸುದ್ದಿಯನ್ನು ಶೇರ್ ಮಾಡಿ

ambiಮಳವಳ್ಳಿ, ಜ.13- ರಾಜಕೀಯ ಹಾಗೂ ಸಿನಿಮಾ ಕ್ಷೆತ್ರದಲ್ಲಿ ಅಂಬಿ ಅವರಂತಹ ಮತ್ತೊಬ್ಬ ವ್ಯಕ್ತಿ ಹುಟ್ಟಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿ ಜಿಲ್ಲೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅವರಂತೆ ಅವರ ಮಗ ಚಿತ್ರರಂಗದಲ್ಲಿ ಬೆಳೆಯಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾರೈಸಿದರು.

ನಗರದ ಸರ್‍ಎಂವಿ ಕ್ರಿಡಾಂಗಣದಲ್ಲಿ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘ ಆಯೋಜಿಸಿದ್ದ ಅಂಬಿ ಪುಣ್ಯಸ್ಮರಣೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂರು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ, ಶಾಸಕ, ಸಚಿವರಾಗಿ ರಾಜಕೀಯದಲ್ಲಿ ಅವರ ಕೊಡುಗೆ ಅಪಾರ ಎಂದರು.

ಮಂಡ್ಯದ ಜನರು ನನ್ನನ್ನು ಮಂಡ್ಯದಿಂದ ದಿಲ್ಲಿಗೆ ಕಳುಹಿಸಿದ್ದಾರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ನನ್ನ ಜನವೇ ನಾನಿಂದು ಈ ರೀತಿ ಇರಲು ಕಾರಣ ಎನ್ನುತ್ತಿದ್ದರು ಎಂದು ಇದೇ ವೇಳೆ ಸ್ಮರಿಸಿದರು. ನಟ ಜಗ್ಗೆಶ್ ಮಾತನಾಡಿ, ಎಂಟಾಣೆ ಕಾರ್ಯ ಮಾಡಿ ಪ್ರಚಾರ ಮಾಡುವ ಜನರ ನಡುವೆ ಅಂಬಿ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯದಂತೆ ಕೆಲಸ ಮಾಡುತ್ತಿದ್ದರು. ಅಂಬರೀಷ್ ಸತ್ತಿಲ್ಲ.

ನಮ್ಮೊಂದಿಗೆ ಇದ್ದಾರೆ ಎಂದರು.  ಹಿರಿಯ ನಟಿ ಬಿ.ಸರೋಜಾದೇವಿ ಮಾತನಾಡಿ, ಮಂಡ್ಯದ ಬೀದಿಗಳ ತುಂಬೆಲ್ಲಾ ನನ್ನ ತಮ್ಮ ಅಂಬಿಯ ಪೋಟೋ ನೋಡಿ ಆತ ಎಲ್ಲೂ ಹೋಗಿಲ್ಲ ಅನಿಸುತ್ತಿದೆ. ನನ್ನ ಸಾವು ಮೊದಲು, ನಂತರ ನಿನ್ನದು ಎಂದು ಅಂಬಿಗೆ ನಾನು ಹೇಳುತ್ತಿದ್ದೆ. ಆದರೆ, ವಿಧಿ ಆಟವೇ ಬೇರೆಯಾಯಿತು ಎಂದು ಭಾವುಕರಾದರು.

ಅಂಬರೀಷ್ ಶೈಲಿಯಲ್ಲೆ ಮಾತು ಆರಂಭಿಸಿ ಅಭಿಮಾನಿಗಳ ಗಮನ ಸೆಳೆದ ಅಂಬಿ ಪುತ್ರ ಅಭಿಷೇಕ್, ಅಂಬರೀಷ್ ಇದ್ದದ್ದು ಹೋದದ್ದು ಎಲ್ಲರಿಗೂ ಗೊತ್ತು. ಹಣ ಮುಖ್ಯವಲ್ಲ ಜನ ಮುಖ್ಯ ಎಂದು ಅಪ್ಪ ಹೇಳುತ್ತಿದ್ದರು. ರಾಜನಂತೆ ಬಾಳಿದ ನಮ್ಮಪ್ಪ ಹಾಗೇ ಹೋದರು. ಅದಕ್ಕೆ ನೀವು ಕಾರಣ. ನಿಮಗೆ ನಾವು ಎಂದೆಂದೂ ಚಿರ ಋುಣಿಯಾಗಿದ್ದೆವೆ. ಹತ್ತು ಜನರಿಗೆ ಒಳ್ಳೆಯದು ಮಾಡು ಎಂದು ಅಪ್ಪ ಯಾವಾಗಲೂ ಹೇಳುತ್ತಿದ್ದರು. ಅದರಂತೆ ನಾವು ಮುಂದೆ ಒಳ್ಳೆಯ ಕೆಲಸವನ್ನೆ ಮಾಡುತ್ತೆವೆ ಎಂದು ಕೈಮುಗಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ರಾಮನಗರ ಶಾಖೆಯ ಕಾರ್ಯದರ್ಶಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಚಿತ್ರ ನಿರ್ದೇಶಕ ಯೋಗರಾಜ್‍ಭಟ್, ನಟರಾದ ಶಿವರಾಜ್‍ಕುಮಾರ್, ಸಾಧುಕೋಕಿಲ, ಯಶ್, ದೊಡ್ಡಣ್ಣ, ಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟಿ ಅಪರ್ಣಾ, ಹಿರಿಯ ಪತ್ರಕರ್ತ ರಂಗನಾಥ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು.

Facebook Comments