ಚೀನಾ ಕಲ್ಲಿದ್ದಲು ಗಣಿ ದುರಂತದಲ್ಲಿ 22 ಕಾರ್ಮಿಕರ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

BEIJING COAL MINEಬೀಜಿಂಗ್, ಜ.13-ಕಲ್ಲಿದ್ದಲು ಗಣಿಯೊಂದರೆ ಮೇಲ್ಛಾವಣಿ ಕುಸಿದು 22 ಕಾರ್ಮಿಕರು ಮೃತಪಟ್ಟು, ಕೆಲವರು ತೀವ್ರ ಗಾಯಗೊಂಡಿರುವ ಘಟನೆ ವಾಯುವ್ಯ ಚೀನಾದಲ್ಲಿ ಸಂಭವಿಸಿದೆ.

ಶಾಂಕ್ಸಿ ಪ್ರಾಂತ್ಯದ ಲಿಜಿಯಾಗಾವು ಕಲ್ಲಿದ್ದಲು ಗಣಿಯಲ್ಲಿ ನಿನ್ನೆ ಅಪರಾಹ್ನ ಈ ದುರ್ಘಟನೆ ಸಂಭವಿಸಿದಾಗ 87 ಗಣಿ ಕಾರ್ಮಿಕರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ದುರಂತದಲ್ಲಿ 22 ಕಾರ್ಮಿಕರು ಸಾವಿಗೀಡಾಗಿದ್ದು, ಅಪಾಯದಲ್ಲಿದ್ದ ಇತರ 65 ಜನರನ್ನು ರಕ್ಷಿಸಲಾಗಿದೆ. ಇವರೆಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.  ಬೈಬಿ ಗಣಿ ಸಂಸ್ಥೆ ಈ ಕಲ್ಲಿದ್ದಲು ಗಣಿಯ ಒಡೆತನ ಹೊಂದಿದೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ವಿಶ್ವದ ಅತ್ಯಧಿಕ ರಫ್ತು ಉತ್ಪಾದಕ ರಾಷ್ಟ್ರವಾದ ಚೀನಾದಲ್ಲಿ ಗಣಿ ದುರಂತಗಳು ಸಾಮಾನ್ಯ. ಅಕ್ರಮ ಗಣಿಗಾರಿಕೆಗಳನ್ನು ಮುಚ್ಚಲಾಗುತ್ತಿದೆಯಾದರೂ ಪದೇ ಪದೇ ಅನಾಹುತ ಮತ್ತು ಸಾವುನೋವುಗಳು ಮರುಕಳಿಸುತ್ತಿವೆ.

Facebook Comments