ಸಜ್ಜನ್‍ಕುಮಾರ್ ಪ್ರಕರಣ, ಸಿಬಿಐಗೆ ಸುಪ್ರೀಂ ನೋಟೀಸ್

ಈ ಸುದ್ದಿಯನ್ನು ಶೇರ್ ಮಾಡಿ

Sajjan Kumarನವದೆಹಲಿ, ಜ.14- 1984ರ ಸಿಖ್ ವಿರೋಧಿ ಗಲಭೆ ಸಂಬಂಧ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಮಾಜಿ ನಾಯಕ ಸಜ್ಜನ್‍ಕುಮಾರ್ ತಮ್ಮ ಮೇಲೆ ಈ ಹಿಂದೆ ಸಿಬಿಐ ಕೈಗೊಂಡ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಮೇರೆಗೆ ಸುಪ್ರೀಂಕೋರ್ಟ್ ಇಂದು ಕೇಂದ್ರೀಯ ತನಿಖಾ ದಳಕ್ಕೆ ನೋಟಿಸ್ ಜಾರಿಗೊಳಿಸಿದೆ.

1984 ನವೆಂಬರ್ 1 ಮತ್ತು 2ರಂದು ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಸಿಖ್ ಸಮುದಾಯದ ಐವರ ಹತ್ಯೆ ಮತ್ತು ಗುರುದ್ವಾರ ಅಗ್ನಿಸ್ಪರ್ಶ ಪ್ರಕರಣದಲ್ಲಿ ಸಜ್ಜನ್‍ಕುಮಾರ್ ದೋಷಿಯಾಗಿದ್ದರು.

ಸುಪ್ರೀಂಕೋರ್ಟ್ 73 ವರ್ಷದ ಕುಮಾರ್‍ಗೆ ಜೀವನದ ಉಳಿದ ಅವಧಿ ಕಾರಾಗೃಹ ಶಿಕ್ಷೆ ತೀರ್ಪು ನೀಡಿದ್ದರು. ಡಿ.31ರಂದು ಅವರು ದೆಹಲಿಯ ನ್ಯಾಯಾಲಯಕ್ಕೆ ಶರಣಾದ ನಂತರ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು.

ಈ ಪ್ರಕರಣದಲ್ಲಿ ಈ ಹಿಂದೆ ಸಿಬಿಐ ತಮ್ಮ ವಿರುದ್ಧ ಕೈಗೊಂಡ ಕ್ರಮವನ್ನು ಪ್ರಶ್ನಿಸಿ ಅವರು ತಮ್ಮ ವಕೀಲರ ಮೂಲಕ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.

Facebook Comments