ಬಿಜೆಪಿ ಶಾಸಕರೇ ಜೆಡಿಎಸ್ ಸಂಪರ್ಕದಲ್ಲಿದ್ದಾರೆ : ಬಂಡೆಪ್ಪ ಕಾಶಂಪುರ್ ಬಾಂಬ್..!

ಈ ಸುದ್ದಿಯನ್ನು ಶೇರ್ ಮಾಡಿ

Bandeppa-Kashyampur--01
ಮುದ್ದೆಬಿಹಾಳ, ಜ.14-ಕಾಂಗ್ರೆಸ್-ಜೆಡಿಎಸ್‍ನ ಯಾವೊಬ್ಬ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿ ಶಾಸಕರೇ ಜೆಡಿಎಸ್ ಸಂಪರ್ಕದಲ್ಲಿದ್ದಾರೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಮುದ್ದೇಬಿಹಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹಾಗಾಗಿ ದೆಹಲಿಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಕೊರತೆ ಇದೆ. ಅದನ್ನು ನಾವು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದರು. ಮುಂಬರುವ ಬಜೆಟ್‍ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ದಾಖಲೆ ಪ್ರಮಾಣದ ಕೊಡುಗೆಯನ್ನು ನೀಡಲಿದ್ದಾರೆ.

ಸಾಲ ಮನ್ನಾ ವಿಷಯದಲ್ಲಿ ಯಾವ ರೈತರಿಗೂ ಅನ್ಯಾಯ ಮಾಡಿಲ್ಲ , ನೋಟೀಸ್ ನೀಡಿಲ್ಲ ಎಂದು ತಿಳಿಸಿದರು.

ಈ ಯೋಜನೆಯಿಂದ ಅನರ್ಹರಿಗೆ ಲಾಭವಾಗುವುದು ತಪ್ಪಲಿ ಎಂಬ ಉದ್ದೇಶದಿಂದ ರೈತರಿಂದ ದಾಖಲೆಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಸರ್ಕಾರ ವೇಗದಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಇದೇ ವೇಳೆ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಸ್ ಓಸ್ವಾಲಾ, ಉಪಾಧ್ಯಕ್ಷ ನಿಂಗಣ್ಣ ಚಟ್ಟೇಲ, ಜೆಡಿಎಸ್ ನಾಯಕಿ ಮಂಗಳಾದೇವಿ ಬಿರಾದಾರ್, ನಿರ್ದೇಶಕರಾದ ರಾಜು ಕರಡಿ, ಸುರೇಶ್ ಕಮತ, ಶಿವಕುಮಾರ್ ಬಿರಾದಾರ್, ವೆಂಕನಗೌಡ ಪಾಟೀಲ್, ಶಾಂತನಗೌಡ ಬಿರಾದಾರ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin