ಜನಸೇವೆಯೇ ನನ್ನ ಜೀವನದ ಗುರಿ : ಎನ್.ಆರ್.ರಮೇಶ್

ಈ ಸುದ್ದಿಯನ್ನು ಶೇರ್ ಮಾಡಿ

Rameshಬೆಂಗಳೂರು, ಜ.14- ಉಸಿರಿರುವವರೆಗೂ ಜನ ಸೇವೆಯೇ ನನ್ನ ಜೀವನದ ಪರಮ ಗುರಿ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ತಿಳಿಸಿದರು. ಸಾವಿರಾರು ಅಭಿಮಾನಿಗಳೊಂದಿಗೆ ಇಂದು ಹುಟ್ಟುಹಬ್ಬ ಆಚರಿಸಿಕೊಂಡ ನಂತರ ಅವರು ಮಾತನಾಡಿದರು.ವಾರ್ಡ್ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿ ದ್ದೇನೆ, ಜೀವವಿರುವವರೆಗೂ ಅಭಿವೃದ್ಧಿಯೇ ನನ್ನ ಮೂಲಮಂತ್ರ ಎಂದು ಹೇಳಿದರು.

ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಸುವುದಾಗಿ ತಿಳಿಸಿದ ಅವರು, ಭ್ರಷ್ಟಾಚಾರಿಗಳೊಂದಿಗೆ ಎಂದಿಗೂ ರಾಜಿ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.ವಾರ್ಡ್ ಜನತೆಗೆ ಮೂಲಸೌಕರ್ಯ ಒದಗಿಸುವುದು ಹಾಗೂ ನೆಮ್ಮದಿಯ ಬದುಕನ್ನು ಕಲ್ಪಿಸಿಕೊಡುವುದು ತಮ್ಮ ಮೂಲ ಉದ್ದೇಶ ಎಂದು ರಮೇಶ್ ಹೇಳಿದರು.

ಜನತೆ ಎಲ್ಲಿಯವರೆಗೂ ತಮ್ಮನ್ನು ಆಶೀರ್ವಾದಿಸುತ್ತಾರೋ ಅಲ್ಲಿಯವರೆಗೂ ಜನಸೇವೆಯಲ್ಲಿ ನಿರತನಾಗಿರುತ್ತೇನೆ ಎಂದು ನುಡಿದರು. ಬಿಜೆಪಿ ತತ್ವ, ಸಿದ್ಧಾಂತವನ್ನು ಎಲ್ಲೆಡೆ ಪಸರಿಸಿ ಕಾರ್ಯಕರ್ತರ ಸಂಘಟನೆಗೆ ಸದಾ ಕಟಿಬದ್ಧನಾಗಿರುತ್ತೇನೆ ಎಂದರು.

ಹುಟ್ಟುಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಉಚಿತ ನೋಟ್‍ಪುಸ್ತಕ ವಿತರಿಸಲಾಯಿತು. ಇಂದು ಬೆಳಗ್ಗೆಯಿಂದಲೇ ಅಭಿಮಾನಿಗಳು ಎನ್.ಆರ್.ರಮೇಶ್ ಅವರಿಗೆ ಹುಟ್ಟುಹಬ್ಬದ ಶುಭ ಕೋರಿ ಸಂಭ್ರಮಿಸಿದರು.

Ramesh0

Facebook Comments