ರಕ್ತ ಚಂದನ ಸಾಗಿಸುತ್ತಿದ್ದ ಕಾರು ಅಪಘಾತ

ಈ ಸುದ್ದಿಯನ್ನು ಶೇರ್ ಮಾಡಿ

carಹೊಸಕೋಟೆ, ಜ.14- ರಕ್ತ ಚಂದನ ಸಾಗಿಸುತ್ತಿದ್ದ ಕಾರು ಚಾಲಕರು ಪೈಪೋಟಿಗೆ ಬಿದ್ದು ಅತಿವೇಗವಾಗಿ ಚಾಲನೆ ಮಾಡಲು ಹೋದಾಗ ನಿಯಂತ್ರಣ ತಪ್ಪಿ ಕಾರುಗಳು ಹಳ್ಳಕ್ಕೆ ಬಿದ್ದಿರುವ ಘಟನೆ ಜಡಿಗೇನಹಳ್ಳಿ ಬಳಿ ನಡೆದಿದೆ.

ಎರಡು ಕಾರುಗಳಲ್ಲಿ ರಕ್ತಚಂದನದ ತುಂಡುಗಳನ್ನು ಸಾಗಿಸಲಾಗುತಿದ್ದು, ಚಾಲಕರು ಒಬ್ಬರಿಗೊಬ್ಬರು ಪೈಪೋಟಿ ಮಾಡಿಕೊಂಡು ಅತಿವೇಗವಾಗಿ ಕಾರು ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಎರಡು ಕಾರುಗಳು ಉರುಳಿ ಬಿದ್ದಿವೆ.

ಇದನ್ನು ಕಂಡ ಸ್ಥಳೀಯರು ಹೊಸಕೋಟೆ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದ್ದಾರೆ.

Facebook Comments