ಯಾವುದೇ ಪ್ರಭಾವಗಳಿಗೆ ಒಳಗಾಗದೆ ಕರ್ತವ್ಯ ನಿರ್ವಹಿಸಿ : ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಸಿಎಂ ಕಿವಿಮಾತು

ಈ ಸುದ್ದಿಯನ್ನು ಶೇರ್ ಮಾಡಿ

H D Kಮೈಸೂರು, ಜ.14- ಯಾವುದೇ ಪ್ರಭಾವಗಳಿಗೆ ಒಳಗಾಗದೆ ತಮ್ಮ ಕರ್ತವ್ಯವನ್ನು ನಿಷ್ಠೆ, ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ನಿಭಾಯಿಸಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು. ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಇಂದು ಆಯೋಜಿಸಿದ್ದ ನಾಲ್ಕನೆ ತಂಡದ ಪೊ್ರಬೆಷನರಿ ಪಿಎಸ್‍ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿನ ಪರಿಸ್ಥಿತಿ ಅವಲೋಕಿಸಿದರೆ ರಾಜಕೀಯ ಪ್ರಭಾವಗಳು ಪೊಲೀಸ್ ಮೇಲೆ ಇರುತ್ತದೆ. ಹಾಗಾಗಿ ನೀವು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಠಾವಂತರಾಗಿ ಕರ್ತವ್ಯ ನಿರ್ವಹಿಸಬೇಕು.

ನಾಡಿನ ಪ್ರತಿಯೊಬ್ಬ ನಾಗರಿಕನಿಗೂ ರಕ್ಷಣೆ ನೀಡಬೇಕಾದ್ದು ಪೊಲೀಸರ ಕರ್ತವ್ಯ. ಅದನ್ನು ಚಾಚೂತಪ್ಪದೆ ನಿಭಾಯಿಸಬೇಕೆಂದು ಕರೆ ನೀಡಿದರು.ದೇಶದಲ್ಲಿನ ಸಮಸ್ತ ಜನತೆಗೂ ನಿಮ್ಮ ರಕ್ಷಣೆ ಅಗತ್ಯವಿದೆ. ಹಾಗಾಗಿ ಜಾತಿ, ಧರ್ಮ, ರಾಜಕೀಯ ಪ್ರಭಾವಗಳಿಗೆ ಒಳಗಾಗಿ ನಿಮ್ಮ ಕರ್ತವ್ಯವನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.

ಸ್ಥಳ ನಿಯುಕ್ತಿಗಾಗಿ ಯಾವುದೇ ರಾಜಕಾರಣಿ ಗಳನ್ನೂ ಸಂಪರ್ಕಿಸುವ ಕೆಲಸ ಮಾಡಬೇಡಿ ಎಂದು ಹೇಳಿದ ಅವರು, ನಿಮಗೆ ನಿಗದಿಪಡಿಸಿರುವ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಿ ಜನತೆಗೆ ರಕ್ಷಣೆ ನೀಡುವುದು ನಿಮ್ಮ ಪ್ರಮುಖ ಧ್ಯೇಯವಾಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ರಾಜು, ಗೃಹ ಸಚಿವ ಎಂ.ಬಿ.ಪಾಟೀಲ್, ಡಿಜಿಪಿ ಪದಮ್‍ಕುಮಾರ್ ಗರ್ಗ್, ಐಜಿಪಿ ರವಿ, ಅಕಾಡೆಮಿ ನಿರ್ದೇಶಕರಾದ ವಿಫುಲ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Facebook Comments