ಫುಟ್ಬಾಲ್ ಸ್ಟಾರ್ ರೊನಾಲ್ಡೋ ವಿರುದ್ಧ ಅರೆಸ್ಟ್ ವಾರೆಂಟ್

ಈ ಸುದ್ದಿಯನ್ನು ಶೇರ್ ಮಾಡಿ

Ronadlo-01

ವಾಷಿಂಗ್ಟನ್, ಜ.14- ರೂಪದರ್ಶಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋರ್ಚುಗಲ್ ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ವಾಲ್ ಸ್ಟ್ರೀಟ್ ಜನರಲ್ ಪತ್ರಿಕೆ ವರದಿ ಮಾಡಿದ್ದು, 2009 ರಲ್ಲಿ ನಡೆದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವಿಶ್ವದ ಅಗ್ರ ಶ್ರೇಯಾಂಕದ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ ಎಂದು ಹೇಳಿದೆ.

ಅಮೆರಿಕದ ರೂಪದರ್ಶಿ ಕ್ಯಾಥರಿನ್ ಮಯೊರ್ಗಾ ಅವರ ಮೇಲೆ ರೊನಾಲ್ಜೋ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ರೊನಾಲ್ಡೋ ಅವರ ಡಿಎನ್‍ಎ ಸಂಗ್ರಹಕ್ಕಾಗಿ ಅವರ ವಿರುದ್ಧ ಲಾಸ್ ವೇಗಾಸ್ ಪೊಲೀಸರ ವಾರೆಂಟ್ ಜಾರಿ ಮಾಡಿದ್ದಾರೆ.

2009ರಲ್ಲಿ ಹೊಟೇಲ್ ರೂಮ್‍ವೊಂದರಲ್ಲಿ ಕ್ರಿಸ್ಟಿಯಾನೊ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ ಈ ಸುದ್ದಿಯನ್ನು ಬಹಿರಂಗಪಡಿಸದಂತೆ 2.7 ಕೋಟಿ ರೂ ಹಣದ ಆಮಿಷ ಒಡ್ಡಿದ್ದರು ಎಂದು ಕ್ಯಾಥರಿನ್ ಕಳೆದ ಅಕ್ಟೋಬರ್‍ನಲ್ಲಿ ಗಂಭೀರ ಆರೋಪ ಮಾಡಿದ್ದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಲಾಸ್ ವೇಗಾಸ್ ಪೊಲೀಸರು, ರೊನಾಲ್ಡೋಗೆ ಡಿಎನ್‍ಎ ಸ್ಯಾಂಪಲ್ ನೀಡುವಂತೆ ತಿಳಿಸಿದ್ದರು. ಆದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದ ರೊನಾಲ್ಡೊ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ.

ದೂರಿಗೆ ಸಂಬಂಧಿಸಿದಂತೆ ಸಹಕರಿಸದ ಕಾರಣ ರೊನಾಲ್ಡೊ ವಿರುದ್ಧ ಲಾಸ್ ವೇಗಾಸ್ ಪೊಲೀಸರು ವಾರೆಂಟ್ ಜಾರಿ ಮಾಡಿದ್ದಾರೆ. ಈ ಸಂಬಂಧ ವಾರೆಂಟ್ ಪ್ರತಿಯನ್ನು ಲಾಸ್ ವೇಗಾಸ್ ಪೊಲೀಸರು ಇಟಲಿ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

Facebook Comments

Sri Raghav

Admin