ಮಾದಕ ವಸ್ತು ಕಡಿವಾಣಕ್ಕೆ ಕೇಂದ್ರದಿಂದ ಪಂಚವಾರ್ಷಿಕ ಕ್ರಿಯಾ ಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

drugs-1

ನವದೆಹಲಿ, ಜ.14- ದೇಶದಲ್ಲಿ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವ ಮಾದಕ ವಸ್ತು ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ರಾಷ್ಟ್ರೀಯ ಪಂಚವಾರ್ಷಿಕ ಕ್ರಿಯಾ ಯೋಜನೆಯೊಂದನ್ನು ಜಾರಿಗೊಳಿಸಲು ಸಿದ್ಧತೆ ನಡೆದಿದೆ.

ಮಾದಕ ವಸ್ತು ಬೇಡಿಕೆ ತಗ್ಗಿಸುವುದಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (2018-2023) ಎಂಬ ಐದು ವರ್ಷಗಳ ಆ್ಯಕ್ಷನ್ ಪ್ಲ್ಯಾನ್ ಕರಡನ್ನು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಸಿದ್ಧಪಡಿಸಿದೆ.  ಇದರೊಂದಿಗೆ ಕಳೆದ ಐದೂವರೆ ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಈ ಯೋಜನೆ ಜಾರಿಗೊಳ್ಳುವ ಕಾಲ ಸನ್ನಿಹಿತವಾಗಿದೆ.

ಮಾದಕ ವಸ್ತು ದುಷ್ಪರಿಣಾಮದ ಬಗ್ಗೆ ಜಾಗೃತಿ, ಈ ದುರಭ್ಯಾಸದಿಂದ ವೆಸನಿಗಳನ್ನು ಮುಕ್ತಗೊಳಿಸುವುದು, ಕುಟುಂಬಕ್ಕೆ ನೆರವು ಮತ್ತು ಸಂತ್ರಸ್ತರ ಪುನರ್‍ವಸತಿ ಯೋಜನೆಗಳೂ ಸಹ ಈ ಕರಡಿನಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಐದೂವರೆ ವರ್ಷಗಳ ಹಿಂದೆ ರಾಷ್ಟ್ರೀಯ ಮಾದಕ ವಸ್ತು ಬೇಡಿಕೆ ತಗ್ಗಿಸುವ ನೀತಿಗೆ ಆಗಿನ ಸರ್ಕಾರ ಮುಂದಾಗಿತ್ತಾದರೂ ಈ ನಿಟ್ಟಿನಲ್ಲಿ ನಿರೀಕ್ಷಿತ ಪ್ರಗತಿ ಕಂಡು ಬಂದಿರಲಿಲ್ಲ. ಈಗ ಪಂಚವಾರ್ಷಿಕ ಕ್ರಿಯಾ ಯೋಜನೆ ಜಾರಿಯಾಗುತ್ತಿರುವುದು ಮಾದಕ ವಸ್ತು ಕಡಿವಾಣಕ್ಕೆ ದಿಟ್ಟ ಹೆಜ್ಜೆಯಾಗಿದೆ.

Facebook Comments