ಐಟಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದ ಕಿಚ್ಚ .. .?

ಈ ಸುದ್ದಿಯನ್ನು ಶೇರ್ ಮಾಡಿ

 

Sudeep--01
ಬೆಂಗಳೂರು. ಜ. 14 : ನಟ ಕಿಚ್ಚ ಸುದೀಪ್ ಇಂದು ಐಟಿ ಅಧಿಕಾರಿಗಳ ಎದುರು ಹಾಜರಾಕಿದ್ದಾರೆ. ತೆಲುಗಿನ ಸೈರಾ ಚಿತ್ರದ ಶೂಟಿಂಗ್ ಬಿಟ್ಟು ವಿಚಾರಣೆ ಹಾಜರಾದ ಸುದೀಪ್ ವಿಚಾರಣೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ನಾವು ಐಟಿ ದಾಳಿ ನಡೆದಾಗ ಹೇಳಿಕೆ ಕೊಟ್ಟು ಸಹಿ ಮಾಡಿದ್ದೇವೆ. ಅದರ ಬಗ್ಗೆ ಮಾತನಾಡಲು ಅಧಿಕಾರಿಗಳು ಕರೆದಿದ್ದು, ಒಂದು ವೇಳೆ ನೀವೇನಾದರೂ ನೀವು ಕೊಟ್ಟ ಹೇಳಿಕೆಯನ್ನು ಬದಲಾಯಿಸಿಕೊಳ್ಳುತ್ತೀರಾ ಎಂದು ಕೇಳಿ ಮತ್ತೆ ಅದನ್ನು ಮರು ಪರಿಶೀಲನೆ ಮಾಡಿ ಖಚಿತ ಪಡಿಸಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಐಟಿ ದಾಳಿ ನಡೆದಾಗ ಪೈಲ್ವಾನ್ ಶೂಟಿಂಗ್ ನಡೆಯುತ್ತಿತ್ತು. ಹಾಗಾಗಿ ಅದೇ ವಾರ ಬರಲು ಸಾಧ್ಯವಾಗಲಿಲ್ಲ. ಅಂದು ನಮ್ಮ ತಾಯಿ ಒಬ್ಬರೇ ಇದ್ದರು ಎಂದು ನಾನು ಬಂದಿದ್ದೆ.

ಇವತ್ತು ಕೂಡ ಸೈರಾ ಶೂಟಿಂಗ್ ಇತ್ತು. ಆದರೆ ಅವರ ಬಳಿಕ ಅವಕಾಶ ಕೇಳಿಕೊಂಡು ಬಂದಿದ್ದೇನೆ. ಸದ್ಯಕ್ಕೆ ಇವತ್ತಿನ ವಿಚಾರಣೆ ಮುಗಿಯಿತು. ಅಗತ್ಯವಿದ್ದಾಗ ಅಧಿಕಾರಿಗಳು ವಿಚಾರಣೆಗೆ ಮತ್ತೆ ಕರೆಯುತ್ತಾರೆ. ಅವರು ವಿಚಾರಣೆಗೆ ಕರೆದರೆ ನಾನು ಬರುತ್ತೇನೆ. ಇವತ್ತೇ ಮುಗಿಯುವಂತಹ ವಿಚಾರ ಅಲ್ಲ ಇನ್ನೂ 5-6 ತಿಂಗಳು ವಿಚಾರಣೆ ನಡೆಯುತ್ತದೆ ಎಂದು ಸುದೀಪ್ ಹೇಳಿದರು.

ನಾನು ಅಳಿಲಿನಷ್ಟು ತಪ್ಪು ಮಾಡಿದ್ದೇನೆ. ನಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದಕ್ಕೆ ಇದೊಂದು ಎಚ್ಚರಿಕೆ ಎಂದು ಸುದೀಪ್ ಪ್ರತಿಕ್ರಿಯಿಸಿದ್ದಾರೆ.

ಬೇರೆ ನಟರು ಹೇಳಿಕೆ ಕೊಡಲು ಹಿಂಜರಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕರ ಜೀವನದಲ್ಲಿ ಇರುವುದಿಂದ ಎಲ್ಲರು ಪ್ರಶ್ನೆ ಮಾಡುತ್ತಾರೆ. ಇದರಿಂದ ಹಿಂಜರಿಯುವುದರಿಂದ ತಪ್ಪು ಸಂದೇಶ ಹೋಗುತ್ತದೆ. ಅವರುಗಳಿಗೆ ಏನು ಸಮಸ್ಯೆ, ಕಿರಿಕಿರಿ ಆಗಿದೆ ಗೊತ್ತಿಲ್ಲ. ಅವರ ಸ್ಥಾನದಲ್ಲಿ ನಾನು ನಿಂತು ಹೇಳಲು ಸಾಧ್ಯವಿಲ್ಲ. ನನ್ನ ಪರ ಅವರು, ಅವರ ಪರ ನಾನು ಮಾತನಾಡಲು ಆಗುವುದಿಲ್ಲ. ಪ್ರತಿಯೊಬ್ಬರು ನಮ್ಮ ಜೀವನದ ಜವಾಬ್ದಾರಿ ತೆಗೆದುಕೊಳ್ಳೋಣ. ಬೇರೆಯವರ ಜೀವನದ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುವುದು ಬೇಡ, ಅವರು ನನ್ನ ಜೀವನದ ಜವಾಬ್ದಾರಿ ತೆಗೆದುಕೊಳ್ಳುವುದು ಬೇಡ ಎಂದರು.

 

Facebook Comments

Sri Raghav

Admin