‘ಆಪರೇಷನ್ ಕಮಲ’ ಮೂರ್ಖತನದ್ದು

ಈ ಸುದ್ದಿಯನ್ನು ಶೇರ್ ಮಾಡಿ

Dinesh-Gunduraoಬೆಂಗಳೂರು,ಜ.14- ಕಳೆದ 7 ತಿಂಗಳಿನಿಂದ ಬಿಜೆಪಿ, ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯುವ ಆಪರೇಷನ್ ಕಮಲ ಮಾಡುತ್ತಿದೆ. ಇದೊಂದು ಕ್ಷುಲ್ಲಕ ಮತ್ತು ಮೂರ್ಖತನ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದರು.

ಸಚಿವರಿಗೆ ಏರ್ಪಡಿಸಿದ್ದ ಉಪಾಹಾರಕೂಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಚಿವರೊಬ್ಬರು ಒಂದು ತಿಂಗಳೊಳಗೆ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಾರೆ.

ಬಿಜೆಪಿ ಮಾಜಿ ಸಚಿವರೊಬ್ಬರು 24 ಗಂಟೆಯೊಳಗೆ ಸರ್ಕಾರ ಪತನವಾಗುತ್ತದೆ ಎನ್ನುತ್ತಾರೆ. ಪದೇ ಪದೇ ಗಡುವು ನಿಗದಿ ಮಾಡುವ ಮಹಾನುಭಾವರು ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ಈಗ ಮತ್ತೆ ಅದೇ ಕತೆಯನ್ನು ಹೆಣೆಯುತ್ತಿದ್ದಾರೆ.  ಬಿಜೆಪಿ ಸರ್ಕಾರ ಬೀಳಿಸುವ ಹುನ್ನಾರ ನಡೆಸುತ್ತಿದೆ. ಆದರೆ ಅವರ ಯಾವುದೇ ಪ್ರಯತ್ನ ಫಲ ನೀಡುವುದಿಲ್ಲ ಎಂದರು. ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ಮಾತನಾಡಿ, ಯಾರೂ ಕೂಡಾ ಪಕ್ಷ ಬಿಟ್ಟು ಹೋಗುವುದಿಲ್ಲ.

ಅತೃಪ್ತರೊಂದಿಗೆ ಮಾತುಕತೆ ನಡೆಸುತ್ತಾರೆ. ಇನ್ನೆರಡು ದಿನದಲ್ಲಿ ಎಲ್ಲರೂ ವಾಪಸ್ಸಾಗುತ್ತಾರೆ. ಇಂದಿನ ಸಭೆಯಲ್ಲಿ ಅಭಿವೃದ್ಧಿಯ ವಿಷಯದ  ಬಗ್ಗೆ ಮಾತನಾಡಿದ್ದೇವೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.

Facebook Comments