ಮಕರ ಸಂಕ್ರಾಂತಿ : ಪ್ರಯಾಗ್ ರಾಜ್‍ನಲ್ಲಿ 1.17ಲಕ್ಷ ಭಕ್ತರ ಕುಂಭಸ್ನಾನ

ಈ ಸುದ್ದಿಯನ್ನು ಶೇರ್ ಮಾಡಿ

Kumbh Mela 2019ಪ್ರಯಾಗ್‍ರಾಜ್, ಜ.14- ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯಲಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾಗಿರುವ ಲಕ್ಷಾಂತರ ಮಂದಿ ಭಕ್ತರು ಮಕರ ಸಂಕ್ರಾಂತಿ ಅಂಗವಾಗಿ ಸಂಗಮ್ ಘಾಟ್‍ನಲ್ಲಿ ಕುಂಭ ಸ್ನಾನ ಮಾಡಿದರು.

1.17 ಲಕ್ಷ ಮಂದಿ ಭಕ್ತರು ಪವಿತ್ರ ಕುಂಭ ಸ್ನಾನ ಮಾಡಿ ಸಂಪ್ರದಾಯದ ಪ್ರಕಾರ ಅಂಜೂರದ ಮರದಡಿ ಪ್ರಾರ್ಥನೆ ಸಲ್ಲಿಸಿದರು. ಮರಕ ಸಂಕ್ರಾಂತಿ ಅಥವಾ ಮಾಘಿ ಎಂದು ಕರೆಯುವ ಹಬ್ಬಕ್ಕೆ ಹಿಂದೂ ಪಂಚಾಂಗದಲ್ಲಿ ವಿಶೇಷ ಮಾನ್ಯತೆ ಇದ್ದು, ಈ ದಿನದಂದು ಸೂರ್ಯ ತನ್ನ ಪಥ ಬದಲಾಯಿಸುತ್ತಾನೆ. ಇಂದಿನಿಂದ ಚಳಿಗಾಲ ಮುಕ್ತಾಯವಾಗಿ ಬೇಸಿಗೆ ಆರಂಭವಾಗುತ್ತದೆ.

Facebook Comments