ಹಳಿ ದುರಸ್ತಿ ಮಾಡುತ್ತಿದ್ದ ಮೂವರು ಕಾರ್ಮಿಕರ ಮೇಲೆ ಹರಿದ ರೈಲು..!

ಈ ಸುದ್ದಿಯನ್ನು ಶೇರ್ ಮಾಡಿ

Tejas-Express--1
ಮುಂಬೈ, ಜ.14 (ಪಿಟಿಐ)-ರೈಲ್ವೆ ಹಳಿ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದ ಮೂವರು ಕಾರ್ಮಿಕರ ಮೇಲೆ ರೈಲೊಂದು ಹರಿದು ಅವರು ದುರಂತ ಸಾವಿಗೀಡಾಗಿರುವ ಘಟನೆ ಮಹಾರಾಷ್ಟ್ರದ ರಾಯ್‍ಗಢ್‍ನಲ್ಲಿ ಸಂಭವಿಸಿದೆ.

ಮುಂಬೈನಿಂದ 66 ಕಿ.ಮೀ. ದೂರದಲ್ಲಿರುವ ರಾಯ್‍ಗಢ್‍ನ ಪೆನ್ ಪ್ರದೇಶದ ಜಿಟೆ ರೈಲ್ವೆ ನಿಲ್ದಾಣದ ಬಳಿ ಈ ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ನಿನ್ನೆ ರಾತ್ರಿ ಮುಂಬೈಗೆ ತೆರಳುತ್ತಿದ್ದ ತೇಜಸ್ ಎಕ್ಸ್‍ಪ್ರೆಸ್ ಕಾರ್ಮಿಕರ ಮೇಲೆ ಹರಿಯಿತು ಎಂದು ಪೊಲೀಸರು ತಿಳಿಸಿದ್ಧಾರೆ.

ಈ ದುರ್ಘಟನೆಯಲ್ಲಿ ಸ್ಥಳದಲ್ಲೇ ಮೃತಪಟ್ಟ ಮೂವರನ್ನು ಅಶೋಕ್ ಬರಿ(30), ನಿಮ್‍ಸಿಂಗ್ ಗುಲ್ಕರ್(40) ಮತ್ತು ಅಜಯ್ ದಂಡೋಡಿಯಾ(18) ಎಂದು ಗುರುತಿಸಲಾಗಿದೆ. ಇವೆರಲ್ಲರೂ ಗುತ್ತಿಗೆ ಕಾರ್ಮಿಕರಾಗಿದ್ದು, ಮಧ್ಯಪ್ರದೇಶದವರು ಎಂದು ಅಧಿಕಾರಿಗಳು ಹೇಳಿದ್ದಾರೆ.

Facebook Comments

Sri Raghav

Admin