ಬೆಂಗಳೂರಿಗರೇ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

BBMP--01ಬೆಂಗಳೂರು,ಜ.14- ಸಂಕ್ರಾಂತಿ ಸಂಭ್ರಮ ದಲ್ಲಿ ಎಲ್ಲೆಂದರಲ್ಲಿ ಕಸ ಹಾಕಿದರೆ ಹುಷಾರ್! ಸಂಕ್ರಾಂತಿ ಹಬ್ಬ ಆಚರಣೆ ಸಂದರ್ಭದಲ್ಲಿ ಎಲ್ಲೆಂದರೆ ತ್ಯಾಜ್ಯ ಬಿಸಾಡಿದರೆ ಬಿಬಿಎಂಪಿಗೆ ದಂಡ ತೆರಬೇಕಾಗುತ್ತದೆ.  ಹೌದು. ಬಿಬಿಎಂಪಿ ಸಿಲಿಕಾನ್ ಸಿಟಿ ನಾಗರೀ ಕರಿಗೆ ಇಂತಹದ್ದೊಂದು ಎಚ್ಚರಿಕೆ ನೀಡಿದೆ.

ನಾಳೆ ಹಬ್ಬ ಆಚರಿಸುವ ಜನರೇ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಬಿಬಿಎಂಪಿ ನಿಗದಿಪಡಿಸಿರುವ ಜಾಗದಲ್ಲೇ ತ್ಯಾಜ್ಯ ಹಾಕಬೇಕು.

ಅದನ್ನು ಬಿಟ್ಟು ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ ಕಟ್ಟಿಟ್ಟ ಬುತ್ತಿ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಎಚ್ಚರಿಸಿದ್ದಾರೆ. ಈಗಾಗಲೇ ಬಿಬಿಎಂಪಿಯ 8 ವಲಯಗಳಲ್ಲಿ ಮಾರ್ಷಲ್‍ಗಳನ್ನು ನೇಮಿಸಲಾಗಿದೆ.

ಮಾರ್ಷಲ್‍ಗಳು ಎಲ್ಲೆಡೆ ನಿಗಾ ಇರಿಸಿದ್ದಾರೆ. ಒಂದು ವೇಳೆ ಯಾರಾದರೂ ಎಲ್ಲೆಂದರಲ್ಲಿ ಕಸ ಹಾಕಿದರೆ ಅವರಿಗೆ ಸ್ಥಳದಲ್ಲೇ ದಂಡ ವಿಧಿಸುತ್ತಾರೆ.

ಈಗಾಗಲೇ ಮಾರ್ಷಲ್‍ಗಳು ಕಾರ್ಯ ಪ್ರವೃತ್ತರಾಗಿದ್ದು, ಹದ್ದಿನ ಕಣ್ಣು ಇಟ್ಟಿದ್ದಾರೆ. ಈವರೆಗೆ ಎಲ್ಲೆಂದರಲ್ಲಿ ಕಸ ಹಾಕುವವರಿಂದ 17 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

Facebook Comments