ತೋಟ ನೋಡಿಕೊಳ್ಳುತ್ತಿದ್ದ ಕಾವಲುಗಾರ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

suicideಮೈಸೂರು,ಜ.14- ತೋಟ ನೋಡಿಕೊಳ್ಳುತ್ತಿದ್ದ ಕಾವಲುಗಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಚ್.ಡಿ.ಕೋಟೆ ಹಿರೆಹಳ್ಳಿ ನಿವಾಸಿ ಜಯಕುಮಾರ್(35) ಆತ್ಮಹತ್ಯೆಗೆ ಶರಣಾಗಿರುವ ಕಾವಲುಗಾರ.

ಗೆರಸನಹಳ್ಳಿಯ ವಿನೋದ್ ಎಂಬುವರ ತೋಟವನ್ನು ನೋಡಿಕೊಳ್ಳುತ್ತಿದ್ದ ಜಯಕುಮಾರ್, ಕುಟುಂಬ ಸಮೇತ  ತೋಟದಲ್ಲಿಯೇ ವಾಸವಿದ್ದರು.  ಎಚ್.ಡಿಕೋಟೆಯಲ್ಲಿ ನಿವಾಸಿಯಾಗಿದ್ದ ಇವರು ಸ್ವಗ್ರಾಮದಲ್ಲಿ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಮನನೊಂದಿದ್ದರು ಎಂದು ಹೇಳಲಾಗಿದೆ.

ರಾತ್ರಿ ತೋಟದ ಮರವೊಂದಕ್ಕೆ ನೇಣು ಬಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಗ್ಗೆ ಜಯಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments