ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿದ ಸುತ್ತೂರು ಶ್ರೀಗಳು ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Swamiji

ತುಮಕೂರು, ಜ.14-ಇಂದು ಬೆಳಗ್ಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ದಿಢೀರನೆ ಸಿದ್ದಗಂಗಾ ಆಸ್ಪತ್ರೆಗೆ ಭೇಟಿ ನೀಡಿ ಡಾ.ಶ್ರೀ ಶಿವಕುಮಾರಸ್ವಾಮೀಜಿಗಳ ಆರೋಗ್ಯದ ಬಗ್ಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುದೀರ್ಘವಾಗಿ ವೈದ್ಯರೊಂದಿಗೆ ಚರ್ಚಿಸಿದರು.

ಮಠದಲ್ಲಿ ಶ್ರೀಗಳಿಗೆ ಚಿಕಿತ್ಸೆಗೆ ನೀಡಿದರೆ ಸೋಂಕು ತಗುಲಬಹುದೆಂಬ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿರಿಸಲಾಗಿದೆ. ಎಲ್ಲಾ ರೀತಿಯ ಚಿಕಿತ್ಸೆಗಳು ನೀಡುತ್ತಿದ್ದರೂ ಉಸಿರಾಟದಲ್ಲಿ ಏರುಪೇರಾಗುತ್ತಿದೆ.

ಇದಕ್ಕಾಗಿ ವೈದ್ಯರ ತಂಡ ನಿರಂತರವಾಗಿ ಅದನ್ನು ಗಮನಿಸುತ್ತಿದ್ದಾರೆ. ಸದ್ಯ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಸುತ್ತೂರು ಶ್ರೀಗಳು ಹೇಳಿದ್ದಾರೆ.

ಶಿವಕುಮಾರಸ್ವಾಮೀಜಿಯವರು ನನ್ನನ್ನು ಕಂಡು ಕೈ ಮುಟ್ಟಿ ಹಸನ್ಮುಖರಾದರು. ಮಾತನಾಡಲು ಪ್ರಯತ್ನಿಸಿದರಾದರೂ ಅವರಿಂದ ಆಗಲಿಲ್ಲ ಎಂದು ಹೇಳಿ ವಿಚಲಿತರಾದರು.

ಶ್ರೀಗಳಿಗೆ ರಕ್ತದಲ್ಲಿನ ಸೋಂಕು ಕಡಿಮೆಯಾದ ನಂತರ ಮಠಕ್ಕೆ ಕರೆದೊಯ್ಯುವ ಬಗ್ಗೆ ನಿರ್ಧರಿಸಲಾಗುವುದು. ಇದು ವೈದ್ಯರು ತಿಳಿಸಬೇಕು ಎಂದು ಹೇಳಿದರು.

Facebook Comments

Sri Raghav

Admin