ಸಿದ್ದಗಂಗಾ ಶ್ರೀಗಳಿಗೆ ‘ಭಾರತ ರತ್ನ’ ನೀಡಬೇಕು : ಖರ್ಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Mallikarjun-Siddaganga
ತುಮಕೂರು, ಜ.14-ತ್ರಿವಿಧ ದಾಸೋಹಿ, ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಅನನ್ಯ ಸೇವೆಯನ್ನು ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

ಅದ್ಭುತ ಸಾಧನೆ ಮಾಡಿರುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಪಕ್ಷಾತೀತವಾಗಿ ಪ್ರಯತ್ನಿಸುತ್ತೇವೆ. ಕೇಂದ್ರ ಸರ್ಕಾರದ ಗಮನ ಸೆಳೆಯುತ್ತೇವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೇರಿದಂತೆ ಇತರರನ್ನು ಒತ್ತಾಯಿಸುತ್ತೇವೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಶ್ರೀಯವರ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇರುವ ಬೆನ್ನಲ್ಲೇ ಲೋಕಸಭೆಯ ವಿರೋದ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತುಮಕೂರು ನಗರದ ಶಿವಕುಮಾರ ಸ್ವಾಮಿ ವೃತ್ತ ಸಮೀಪ ಇರುವ ಸಿದ್ದಗಂಗಾ ಫಾರ್ಮಸಿ ಅಸ್ಪತ್ರೆಗೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಅವರು ಆರೋಗ್ಯ ವಿಚಾರಿಸಿದರು.

ಶ್ರೀಯವರ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ ಅವರ ಮಾರ್ಗದರ್ಶನ ನಮಗೆ ಸೇರಿದಂತೆ ರಾಜ್ಯ ರಾಷ್ಟ್ರದ ಪ್ರತಿಯೊಬ್ಬರಿಗೆ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ವೈದ್ಯರು ಉತ್ತಮ ರೀತಿಯ ಚಿಕಿತ್ಸೆ ನೀಡುತಿz್ದÁರೆ ಇಲ್ಲಿನ ವೈದ್ಯರು ನಿರಂತರವಾಗಿ ಶ್ರೀಯವರ ಆರೋಗ್ಯ ಮೇಲೆ ತೀವ್ರ ನಿಗಾ ವಹಿಸಿz್ದÁರೆ. ವೈದ್ಯರು ಶ್ರಮ ಶ್ಲಾಘನೀಯ. ಅವರು ಬೇಗ ಗುಣಮುಖರಾಗುತ್ತಾರೆ ಎಂದರು.

Facebook Comments

Sri Raghav

Admin