ಈ ಹಿಂದೆ ಕಾಂಗ್ರೆಸ್ ಸುಲ್ತಾನ್ ಶೈಲಿ ಆಡಳಿತ ನಡೆಸಿತ್ತು : ವಿರುದ್ಧ ಮೋದಿ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

pm modi
ಬಾಲನ್‍ಗಿರ್(ಒಡಿಶಾ), ಜ.15- ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳು ಸುಲ್ತಾನ್ ಶೈಲಿಯ ಆಡಳಿತ ನಡೆಸಿದ್ದವು. ನಮ್ಮ ದೇಶದ ಭವಿಷ್ಯ ಸಂಸ್ಕøತಿಯನ್ನು ರಕ್ಷಿಸುವಲ್ಲಿ ದಿವ್ಯ ನಿರ್ಲಕ್ಷ್ಯ ತೋರಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಒಡಿಶಾದ ಬಾಲನ್‍ಗಿರ್‍ನಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, ತಮ್ಮ ನೇತೃತ್ವದ ಸರ್ಕಾರ ದೇಶದ ಶ್ರೀಮಂತ ಸಂಸ್ಕøತಿ ಮತ್ತು ನಾಗರಿಕತೆಯನ್ನು ಸಂರಕ್ಷಿಸಿರುವುದಲ್ಲದೆ, ಪ್ರಾಚೀನ ಪರಂಪರೆಗೆ ಆಧುನಿಕ ಸ್ಪರ್ಶ ನೀಡಿದೆ ಎಂದು ಹೇಳಿದರು.

ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರಗಳು ಯೋಗದ ಮಹತ್ವವನ್ನು ಪರಿಗಣಿಸಲಿಲ್ಲ. ಈ ಪ್ರಾಚೀನ ವೈದ್ಯಕೀಯ ವಿಜ್ಞಾನವನ್ನು ಕಡೆಗಣಿಸಿದ್ದವು.

ಆದರೆ, ಎನ್‍ಡಿಎ ಸರ್ಕಾರ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಲೋಕಪ್ರಿಯಗೊಳಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಇದಕ್ಕೂ ಮುನ್ನ ಪ್ರಧಾನಿ 1550 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲನ್ಯಾಸ ನೆರವೇರಿಸಿದರು.

Facebook Comments

Sri Raghav

Admin