ಗುಜರಾತ್ ಗಲಭೆಯಲ್ಲಿ ಮೋದಿ ನಿರ್ದೋಷಿ ಪ್ರಕರಣ :  4 ವಾರಗಳ ನಂತರ ಸುಪ್ರೀಂ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

Supreme-Court
ನವದೆಹಲಿ, ಜ.15 (ಪಿಟಿಐ)- ಗುಜರಾತ್‍ನ ಗೋಧ್ರಾದಲ್ಲಿ 2002ರಲ್ಲಿ ನಡೆದ ಗಲಭೆ ಸಂಬಂಧ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ನಿರ್ದೋಷಿ ಎಂದು ಪರಿಗಣಿಸಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ) ವಿರುದ್ಧ ಝಕೀಯಾ ಜಫ್ರಿ ಅವರು ಸಲ್ಲಿರುವ ಮೇಲ್ಮನವಿ ಕುರಿತು ನಾಲ್ಕು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಇದು ತಿಳಿಸಿದೆ.

ಇಂದು ಈ ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಅಜಯ್ ರಸ್ತೋಗಿ ಅವರನ್ನು ಒಳಗೊಂಡ ಪೀಠ ನಾಲ್ಕು ವಾರಗಳ ನಂತರ ಈ ಬಗ್ಗೆ ಕೂಲಂಕಷ ವಿಚಾರಣೆಗೆ ಅವಕಾಶ ನೀಡಲಾಗುವುದು ಎಂದು ಹೇಳಿತು.

ಗಲಭೆ ವೇಳೆ ಮಾಜಿ ಸಂಸದ ಎಹಸಾನ್ ಜಫ್ರಿ ಅವರನ್ನು ಉದ್ರಿಕ್ತ ಗುಂಪೊಂದು ಹತ್ಯೆ ಮಾಡಿತ್ತು. ಗೋದ್ರಾದಲ್ಲಿ ನಡೆದ ಈ ಗಲಭೆ ಸಂಬಂಧ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧದ ಅರ್ಜಿಯನ್ನು ಅಕ್ಟೋಬರ್ 5, 2017ರಲ್ಲಿ ಗುಜರಾತ್ ಹೈಕೋರ್ಟ್ ವಜಾಗೊಳಿಸಿತ್ತು.

ಇದನ್ನು ಪ್ರಶ್ನಿಸಿ ಮಾಜಿ ಸಂಸದರ ಪತ್ನಿ ಝಾಕಿಯಾ ಸುಪ್ರೀಂ ಮೊರೆ ಹೋಗಿದ್ದಾರೆ.

Facebook Comments

Sri Raghav

Admin