ಚಾಮುಂಡಿ ಬೆಟ್ಟದಲ್ಲಿ ಪುರಾತನ ಕಾಲದ ಕಲ್ಯಾಣಿ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Mysuru--01
ಮೈಸೂರು, ಜ.15- ಪುರಾಣ ಪ್ರಸಿದ್ಧ ಚಾಮುಂಡಿ ಬೆಟ್ಟದಲ್ಲಿ ಪುರಾತನ ಕಾಲದ ಕಲ್ಯಾಣಿ ಪತ್ತೆಯಾಗಿದ್ದು ಭಕ್ತರು ಕುತೂಹಲದಿಂದ ವೀಕ್ಷಿಸಲು ಆಗಮಿಸುತ್ತಿದ್ದಾರೆ. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯ ಹಿಂಭಾಗದಲ್ಲಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನದ ಬಳಿ ಪುರಾತನ ಕಲ್ಯಾಣಿ ಪತ್ತೆಯಾಗಿದೆ.

ಮಹಾಬಲೇಶ್ವರ ದೇವಸ್ಥಾನದ ಬಳಿ ಕಾಮಗಾರಿ ನಡೆಸುತ್ತಿದ್ದ ವೇಳೆ ಕಾರ್ಮಿಕರಿಗೆ ಮೆಟ್ಟಿಲು ಮಾದರಿ ಕಂಡು ಬಂದಿದೆ. ತಕ್ಷಣ ಜೋಪಾನವಾಗಿ ಅದರ ಸುತ್ತಮುತ್ತಲಿನ ಮಣ್ಣನ್ನು ಸರಿಸಿ ನೋಡಿದಾಗ ಮೆಟ್ಟಿಲುಗಳ ಮಾದರಿ ಗೋಚರವಾಗಿದೆ.

ಮಣ್ಣನ್ನು ತೆಗೆಯುತ್ತಾ ಹೋದಂತೆ 10 ರಿಂದ 20 ಅಡಿ ಅಗಲ ಹಾಗೂ 10 ಅಡಿ ಆಳದ ಐದು ಮೆಟ್ಟಿಲುಗಳುಳ್ಳ ಕಲ್ಯಾಣಿ ಕಂಡು ಬಂದಿತು. ಕಾಮಗಾರಿ ಸ್ಥಗಿತಗೊಳಿಸಿ ನಂತರ ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಯಿತು.

ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ರಾಜರ ಕಾಲದಲ್ಲಿ ಈ ಕಲ್ಯಾಣಿ ನಿರ್ಮಾಣವಾಗಿರಬಹುದು. ಚಾಮುಂಡಿ ಬೆಟ್ಟದಲ್ಲಿ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಕಲ್ಯಾಣಿ ಮುಚ್ಚಿ ಹೋಗಿರಬಹುದು ಎಂದು ಅಭಿಪ್ರಾಯಪಟ್ಟರು.

ಇದರ ಬಗ್ಗೆ ಇನ್ನೂ ಹೆಚ್ಚು ಉತ್ಖನನ ನಡೆಸಿದ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದರು. ಕಲ್ಯಾಣಿಯನ್ನು ಸ್ವಚ್ಛಪಡಿಸಲಾಗಿದ್ದು , ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು , ಜನ ತಂಡೋಪತಂಡವಾಗಿ ಆಗಮಿಸಿ ಕುತೂಹಲ ತಣಿಸಿಕೊಳ್ಳುತ್ತಿದ್ದಾರೆ.

Facebook Comments

Sri Raghav

Admin