ಪಿಎಸ್‍ಐ ಪ್ರಶ್ನೆ ಪತ್ರಿಕೆ ಸೋರಿಕೆಗೆ ಯತ್ನ ಪ್ರಕರಣ : ಬಂಧಿತರ ಸಂಖ್ಯೆ 17 ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Question-Papers-Whatsapp

ಬೆಂಗಳೂರು, ಜ.15-ಪಿಎಸ್‍ಐ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಯತ್ನಿಸುತ್ತಿದ್ದ ಆರೋಪಿಗಳ ಬಂಧನದ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ಬೆಳಗಾವಿ ಜಿಲ್ಲೆ ಜಳಕಿಯ ಪೂಜಾರ್ (45) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ 16 ಮಂದಿಯನ್ನು ಬಂಧಿಸಲಾಗಿದ್ದು, ಇವರಲ್ಲಿ ಎಎಸ್‍ಐ ಹಾಗೂ ಶಿಕ್ಷಕರು ಸೇರಿದ್ದಾರೆ.

ಇನ್ನಷ್ಟು ಮಂದಿಪೊಲೀಸರು, ಶಿಕ್ಷಕರು ಬಾಗಿಯಾಗಿರುವ ಬಗ್ಗೆ ಶಂಕೆ ಇದ್ದು ತನಿಖೆ ಮುಂದುವರೆದಿದೆ. ಅಪರಾಧ ವಿಭಾಗದ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಆರೋಪಿಗಳ ಶೋಧ ಮುಂದುವರೆದಿದೆ.

ಪರೀಕ್ಷೆಗೂ ಮುನ್ನ ಬಂಧಿತ ಆರೋಪಿಗಳು ಹಾಗೂ ತಲೆ ಮರೆಸಿಕೊಂಡಿರುವವರು ಅಭ್ಯರ್ಥಿಗಳು ಹಾಗೂ ಸಂಬಂಧಿಕರನ್ನು ಸಂಪರ್ಕಿಸಿ ಪ್ರಶ್ನೆ ಪತ್ರಿಕೆ ನೀಡುವ ಆಮಿಷವೊಡ್ಡಿ ಹಣಕ್ಕೆ ಬೇಡಿಕೆಯಿಟ್ಟಿದ್ದರು.

ಆರೋಪಿಗಳ ಬಂಧನಕ್ಕೆ ಸಿಸಿಬಿ ಅಧಿಕಾರಿಗಳು ಪ್ರತ್ಯೇಕ 8 ತಂಡಗಳನ್ನು ರಚಿಸಿದ್ದರು. ತಂಡಗಳು ರಾಜ್ಯಾದ್ಯಂತ ಜಾಲಾಡಿ ಇದುವರೆಗೂ 17 ಮಂದಿಯನ್ನು ಬಂಧಿಸಿದೆ.

ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ (ಸಿವಿಲ್) ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗದೆ ಸುಸೂತ್ರವಾಗಿ ಪರೀಕ್ಷೆ ನಡೆದಿದೆ ಎಂದು ಹಿರಿಯಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

Facebook Comments

Sri Raghav

Admin