ಟ್ರಂಪ್ ಆಡಳಿತಕ್ಕೆ ಭಾರತೀಯ ಮೂಲದ ರಾಜ್‍ಶಾ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

Shah--01

ವಾಷಿಂಗ್ಟನ್, ಜ.15- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ತೊರೆಯುತ್ತಿರುವ ಉನ್ನತಾಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಶ್ವೇತಭವನದಲ್ಲಿ ಮಾಧ್ಯಮ ವಿಭಾಗದ ಉಪ ವಕ್ತಾರರಾಗಿದ್ದ ಭಾರತೀಯ ಮೂಲದ ರಾಜ್ ಶಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಖಾಸಗಿ ಸಂಸ್ಥೆಯೊಂದಕ್ಕೆ ಸೇರ್ಪಡೆಯಾಗಿದ್ದಾರೆ.

ಟ್ರಂಪ್ ಆಡಳಿತ ವೈಖರಿ ಮತ್ತು ಅವ್ಯವಸ್ಥೆ ಹಿನ್ನೆಲೆಯಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು
ಹೇಳಲಾಗುತ್ತಿದೆ.

ರಿಪಬ್ಲಿಕನ್ ನ್ಯಾಷನಲ್ ಕಮಿಟಿಯಲ್ಲಿ ಸಂಶೋಧಕರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ 34 ವರ್ಷದ ರಾಜ್ ಶಾ, ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ವೈಟ್‍ಹೌಸ್‍ನ ಪ್ರೆಸ್ ಡಿವಿಜನ್‍ನ ಡೆಪ್ಯೂಟಿ ಸ್ಪೋಕ್ಸ್‍ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಇವರ ರಾಜೀನಾಮೆಯಿಂದ ಶ್ವೇತಭವನ ತೊರೆಯುತ್ತಿರುವ ಉನ್ನತಾಧಿಕಾರಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.

Facebook Comments

Sri Raghav

Admin