ಮೊದಲ ಹಂತದ ‘ಆಪರೇಷನ್’ ಸಕ್ಸಸ್, ದೋಸ್ತಿಗಳಿಗೆ ಬಿಗ್ ಶಾಕ್..! ಮುಂದೇನಾಗುತ್ತೆ..?

ಈ ಸುದ್ದಿಯನ್ನು ಶೇರ್ ಮಾಡಿ

MLA-independent

ಬೆಂಗಳೂರು. ಜ. 5 : ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ದೊಡ್ಡ ಆಘಾತ ಆಗಿದೆ. ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ, ಮಾಜಿ ಅರಣ್ಯ ಸಚಿವ ಆರ್.ಶಂಕರ್ ಹಾಗೂ ಮುಳಬಾಗಿಲು ಕ್ಷೇತ್ರದ ಶಾಸಕ ಹೆಚ್.ನಾಗೇಶ್ ದೋಸ್ತಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿದ್ದಾರೆ.

ಸರ್ಕಾರದ ಇತ್ತೀಚನ ನಡವಳಿಕೆಯಿಂದ ಬೇಸತ್ತ ಈ ಇಬ್ಬರು ಪಕ್ಷೇತರ ಶಾಸಕರು ತಮ್ಮ ಬೆಂಬಲವನ್ನು ವಾಪಸ್ ಪಡೆಯುವುದಾಗಿ ರಾಜ್ಯಪಾಲ ವಜುಭಾಯ್ ವಾಲಾ ಅವರಿಗೆ ಪತ್ರ ಬರೆದಿದ್ದಾರೆ.

ಇಂದು ಮಕರ ಸಂಕ್ರಾಂತಿ, ಈ ದಿನ ನಾವು ಸರ್ಕಾರವನ್ನು ಬದಲಾವಣೆ ಮಾಡಲು ಮುಂದಾಗಿದ್ದೇವೆ. ಸರ್ಕಾರ ಪ್ರಮಾಣಿಕವಾಗಿರಬೇಕು. ಅದಕ್ಕಾಗಿ ನೀಡಿದ ಬೆಂಬಲವನ್ನು ವಾಪಸ್ ಪಡೆಯುತ್ತಿದ್ದೇನೆ’ ಎಂದು ಆರ್.ಶಂಕರ್ ಹೇಳಿದರು.

ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರೋ ಆರ್. ಶಂಕರ್, ಇಂದು ಮಕರ ಸಂಕ್ರಾಂತಿ, ಈ ದಿನ ನಾವು ಸರ್ಕಾರದಲ್ಲಿ ಬದಲಾವಣೆ ಬೇಕೆಂದು ಬಯಸಿದ್ದೇವೆ. ಸರ್ಕಾರ ಸಮರ್ಥವಾಗಿರಬೇಕು. ಹೀಗಾಗಿ ಇಂದು ನಾನು ನನ್ನ ಬೆಂಬಲ ವಾಪಸ್ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಪಕ್ಷೇತರ ಶಾಸಕರು ತಮ್ಮ ಬೆಂಬಲ ವಾಪಸ್ ಪಡೆದರೂ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಸದ್ಯ ಸಮ್ಮಿಶ್ರ ಸರ್ಕಾರ 120 ಶಾಸಕರ ಬಲಾಬಲ ಹೊಂದಿದೆ. ಇದರಲ್ಲಿ ಇಬ್ಬರು ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದಿದ್ದು ಸರ್ಕಾರದ ಬಲಾಬಲ 118ಕ್ಕೆ ಇಳಿಕೆ ಆಗಿದೆ.

ಮುಂಬೈನ ಹೋಟೆಲ್‌ನಲ್ಲಿರುವ ಇಬ್ಬರು ಶಾಸಕರು ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದಾರೆ. ಆದ್ದರಿಂದ, ಸಂಜೆಯ ಹೊತ್ತಿಗೆ ಇಬ್ಬರು ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯಪಾಲರ ಭೇಟಿಗೆ ಶಾಸಕರು ಸಮಯಾವಕಾಶ ಕೋರಿದ್ದಾರೆ. ಯಾವುದೇ ಸಂದರ್ಭದಲ್ಲಿ ರಾಜಭವನದಿಂದ ಬರಬಹುದಾದ ದೂರವಾಣಿ ಕರೆಯನ್ನು ಎದುರು ನೋಡುತ್ತಿದ್ದಾರೆ.

ಆದರೆ, ಈ ಇಬ್ಬರೂ ಶಾಸಕರು ಬೆಂಬಲ ವಾಪಸ್ ಪಡೆಯುವುದರಿಂದ ಸರ್ಕಾರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಏಕೆಂದರೆ, ಸಮ್ಮಿಶ್ರ ಸರ್ಕಾರಕ್ಕೆ ಈಗಿನ ಪರಿಸ್ಥಿತಿಯಲ್ಲಿ 118 ಶಾಸಕರ ಬೆಂಬಲವಿದೆ.

ವಿಧಾನಸಭೆಯಲ್ಲಿ ಯಾವುದೇ ಸರ್ಕಾರಕ್ಕೆ ಸರಳ ಬಹುಮತವಾಗಿ 113 ಶಾಸಕರನ್ನು ಹೊಂದಿದ್ದರೆ ಸಾಕು. ಇಂದು ಈ ಇಬ್ಬರು ರಾಜೀನಾಮೆ ನೀಡಿದರೆ ಒಂದೆರಡು ದಿನಗಳಲ್ಲಿ ಅತೃಪ್ತ ಶಾಸಕರು ಇದೇ ಹಾದಿ ತುಳಿಯುವ ಸಂಭವವಿದೆ ಎನ್ನಲಾಗುತ್ತಿದೆ.

ಈ ಹಿಂದೆ ಆರ್.ಶಂಕರ್ ಸರ್ಕಾರಕ್ಕೆ ಬೆಂಬಲ ನೀಡಿದ್ದರಿಂದ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿತ್ತು. ಆದರೆ, ಇತ್ತೀಚೆಗೆ ಸಂಪುಟ ಪುನಾರಚನೆ ಸಂದರ್ಭದಲ್ಲಿ ಅವರನ್ನು ಕೈ ಬಿಡಲಾಗಿತ್ತು. ಹೀಗಾಗಿ ಕಾಂಗ್ರೆಸ್ ಮೇಲೆ ಅವರು ಮುನಿಸಿಕೊಂಡಿದ್ದಾರೆ. ಇನ್ನು ಸರ್ಕಾರ ರಚನೆಯಾದ ವೇಳೆಯೇ ಮುಳಬಾಗಿಲು ಶಾಸಕ ನಾಗೇಶ್ ಅವರಿಗೆ ಸಚಿವ ಸ್ಥಾನದ ಆಶ್ವಾಸನೆ ನೀಡಲಾಗಿತ್ತು.

ಕೊನೆ ಕ್ಷಣದಲ್ಲಿ ಅವರನ್ನು ಕೈಬಿಟ್ಟಿದ್ದರಿಂದ ಅವರು ಕೂಡ ಸರ್ಕಾರದ ಮೇಲೆ ಕೆಂಡ ಕಾರುತ್ತಿದ್ದರು. ಒಂದು ವೇಳೆ ಶಂಕರ್ ಮತ್ತು ನಾಗೇಶ್ ಇಂದು ಬೆಂಬಲ ವಾಪಸ್ ಪಡೆದರೆ ಭಿನ್ನಮತೀಯರು ಕೂಡ ಯಾವುದೇ ಕ್ಷಣದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

Facebook Comments

Sri Raghav

Admin