ಐಟಿ-ಬಿಟಿ ಮುಖ್ಯಸ್ಥರೊಂದಿಗೆ ಡಿಸಿಎಂ ಪರಮೇಶ್ವರ್ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Parameshwar

ಬೆಂಗಳೂರು. ಜ. 16 : ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು ಟೆಕ್‌ ಸಮ್ಮಿಟ್‌ ಪೂರ್ವಭಾವಿಯಾಗಿ ಮಾಹಿತಿ, ಜೈವಿಕ, ವಿ್ಜ್ಜ್ಞಾಜ್ಞಾನ ತಂತ್ರಜ್ಞಾನದ ಕುರಿತು ಎಲ್ಲ ಉದ್ಯಮಿಗಳೊಂದಿಗೆ ಇಂದು ತಾಜ್‌ವೆಸ್ಟೆಂಡ್ ಹೋಟೆಲ್‌ನಲ್ಲಿ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಸಭೆ ನಡೆಸಿದರು.

ಇಂದು ಬೆಂಗಳೂರು‌ ನಗರ ಐಟಿ ಬಿಟಿ ಸಿಟಿಯಾಗಿ ಗುರುತಿಸಿಕೊಳ್ಳುತ್ತಿದೆ. ಸ್ಟಾರ್ಟ್‌ಅಪ್‌ ಪಾಲಿಸಿಯನ್ನು ಕರ್ನಾಟಕ ಸರಕಾರ ಮೊದಲ ಬಾರಿಗೆ ಜಾರಿಗೆ ತಂದಿದೆ.‌ ಇಂದು ದೇಶದಲ್ಲಿ 40 ಸಾವಿರ ಸ್ಟಾರ್ಟ್‌ಅಪ್‌ಗಳು ಇದ್ದು, ಈ ಪೈಕಿ 13 ಸಾವಿರ ಸ್ಟಾರ್ಟ್‌ಅಪ್‌ ಕರ್ನಾಟಕದಲ್ಲಿವೆ.

ಕರ್ನಾಟಕದಲ್ಲಿ ಸಂಶೋದನ ಹಾಗೂ ಕೈಗಾರಿಕೆ ಸ್ಥಾಪನೆಗೆ ಉತ್ತಮ ವಾತಾವರಣ ನಿರ್ಮಿಸಿಕೊಡಲಾಗಿದೆ. ಹೀಗಾಗಿ ವಿಶ್ವದೆಲ್ಲೆಡೆಯಿಂದ ಉದ್ಯಮಿಗಳು ಕಂಪನಿ ತೆರೆಯಲು ನಮ್ಮ ರಾಜ್ಯವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರು. ಇಂದು‌ ಕೈಗಾರಿಕೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಹಲವು ವಿಚಾರಗಳನ್ನು ಚರ್ಚಿಸಿದೆವು. ಹಲವು ವಿಚಾರಗಳ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಿದ್ದಾರೆ.‌ ಕೈಗಾರಿಕೆ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ.‌

ಕೇವಲ ಕೈಗಾರಿಕೆ ಅಷ್ಟೆ ಅಲ್ಲದೇ ಮಾರುಕಟ್ಟೆ, ಕೃಷಿ, ಹವಾಮಾನ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಈ ಸಮಸ್ಯೆಗೂ ಕೂಡ ವೈಜ್ಞಾನಿಕವಾಗಿ ಸಂಶೋಧನೆ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ಈ‌ ನಿಟ್ಟಿನಲ್ಲಿ ಇಂಡಸ್ಟ್ರೀಗಳು ಗಮನ ಹರಿಸಬೇಕಿದೆ.

ಕೈಗಾರಿಕಾ ಕ್ಷೇತ್ರದಲ್ಲೂ ಹಲವು ಚಾಲೆಂಜೆಸ್‌ಗಳ ಮೇಲೆ ಉದ್ಯಮಿಗಳು ಬೆಳಕು ಚೆಲ್ಲಿದ್ದಾರೆ. ಮುಂದಿನ ಪೀಳಿಗೆ ಏನೆಲ್ಲ ಸಮಸ್ಯೆ ಎದುರಿಸಬಹುದು ಅದಕ್ಕೆ ಈಗಿನಿಂದಲೇ ಏನೆಲ್ಲಾ ಪರಿಹಾರ ಕಂಡುಕೊಳ್ಳಬಹುದು, ಯಾವೆಲ್ಲ ಸುಧಾರಣೆ ತರಬಹುದು ಎಂಬುದರ ಬಗ್ಗೆ ಕೂಡ ಈ ಸಭೆಯಲ್ಲಿ ಚರ್ಚಿಸಿದೆವು ಎಂದರು.

ಕೈಗಾರಿಕೆ ಕ್ಷೇತ್ರ ಇನ್ನಷ್ಟು ಬಲಿಷ್ಠವಾಗಬೇಕಿದ್ದರೆ ಶಿಕ್ಷಣ ಸಂಸ್ಥೆಗಳು ಕೈಗಾರಿಕೆಗಳೊಂದಿಗೆ ನೇರ ಸಂಪರ್ಕ‌ ಹೊಂದುವ ಅನಿವಾರ್ಯತೆ ಇದೆ. ಉದ್ಯಮಕ್ಕೆ ಬೇಕಾದ ರೀತಿಯ ಶಿಕ್ಷಣ, ತರಬೇತಿ ನೀಡಬೇಕೆಂದರೆ ಅಕಾಡೆಮಿ ಹಾಗೂ ಕೈಗಾರಿಕೆ‌ ನಡುವೆ ಸೇತುವೆ ಇರಬೇಕು. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಪಠ್ಯಪುಸ್ತಕ ಬದಲಿಸುವ ಉದ್ದೇಶ ಹೊಂದಿದ್ದೆ ಎಂದರು.

ತುಮಕೂರಿನಲ್ಲಿ ಬೃಹತ್ ಕೈಗಾರಿಕಾ ಹಬ್ ನಿರ್ಮಾಣ ಮಾಡುವ ಮೂಲಕ‌ ಕೈಗಾರಿಕಾ ಕ್ಷೇತ್ರದಲ್ಲಿ‌ ಕರ್ನಾಟಕ‌ ಮೊದಲ‌ ಸ್ಥಾನಕ್ಕೇರುತ್ತಿದೆ. ಈ ಹಬ್‌ನಲ್ಲಿ ಜಪಾನಿಸ್ ಹಬ್‌ ಕೂಡ ತಲೆ ಎತ್ತುತ್ತಿ್ದೆದೆ. ಒಟ್ಟಾರೆ ಕರ್ನಾಟಕ ಸರಕಾರ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಸಂಪೂರ್ಣ ಸಹಕಾರ ಹಾಗೂ ಬೆಂಬಲ ನೀಡುತ್ತಾ ಬಂದಿದೆ ಎಂದರು.

Facebook Comments

Sri Raghav

Admin