ಕೊಡಗು ಜಿಲ್ಲೆಯ 840 ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

Kodagu--01

ಬೆಂಗಳೂರು, ಜ. 16 : ಕೊಡಗು ಜಿಲ್ಲೆಯಲ್ಲಿ ನೆರೆಹಾವಳಿ ಹಾಗೂ ಭೂಕುಸಿತದಿಂದ ಹಾನಿಗೊಳಗಾದ 840 ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಲು ಎರಡು ಬೆಡ್ ರೂಮ್ಮನೆಗಳನ್ನು ಪ್ರತಿ ಮನೆಗೆ ಅಂದಾಜು ರೂ 9.85 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲು ಹಾಗೂ ಒಟ್ಟಾರೆ ಯೋಜನೆಗೆ ರೂ 8274 ಲಕ್ಷ ಮೊತ್ತದಲ್ಲಿ ನಿರ್ವಹಿಸಲುಸರ್ಕಾರದಿಂದ ದಿನಾಂಕ: 27-11-2018 ರಂದು ಅನುಮೋದನೆ ನೀಡಲಾಗಿದೆ.

ಈ ಮನೆಗಳ ನಿರ್ಮಾಣ ಕಾಮಗಾರಿಯನ್ನು ನಿರ್ಮಾಣ ಸಂಸ್ಥೆಯಾದ ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಕೇಂದ್ರಕ್ಕೆ ವಹಿಸಲಾಗಿದೆ. ಇದಲ್ಲದೇಬಡಾವಣೆಗಳಿಗೆ ಮೂಲಭೂತ ಸೌಕರ್ಯ ಕಾಮಗಾರಿಗಳಿಗೆ ಒಟ್ಟು ರೂ 31.63 ಕೋಟಿಗಳನ್ನು ಮುಖ್ಯಮಂತ್ರಿಗಳವರ ಪರಿಹಾರ ನಿಧಿಯಿಂದ ಭರಿಸಲು ಸರ್ಕಾರವುದಿನಾಂಕ: 05-12-2018 ರಂದು ಅನುಮೋದನೆ ನೀಡಿರುತ್ತದೆ.

ಮನೆ ನಿರ್ಮಾಣದ ಅಂದಾಜು ವೆಚ್ಚದಲ್ಲಿ ಸಹಾಯಧನದ ಮೊತ್ತ (ವಿವಿಧ ವಸತಿ ಯೋಜನೆಗಳಡಿ ನೀಡಲಾಗುವ ಸಹಾಯಧನ) ರೂ 1111 ಲಕ್ಷ ರೂ. ಗಳನ್ನು ಹಾಗೂ ಬಾಕಿ ರೂ 7163 ಲಕ್ಷಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಸಂಸ್ಥೆಗೆ ಬಿಡುಗಡೆಮಾಡಲು ಆದೇಶಿಸಲಾಗಿದೆ.

ಮುಖ್ಯಮಂತ್ರಿಗಳು ದಿನಾಂಕ: 07-12-2018 ರಂದು ಮನೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿರುತ್ತಾರೆ. ನಿರ್ಮಾಣ ಸಂಸ್ಥೆಯಾದ ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಕೇಂದ್ರದಿಂದ ಮನೆಗಳ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ.

ಇನ್ನುಳಿದಪ್ರದೇಶಗಳಲ್ಲಿ ಕೂಡಲೇ ಮನೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಸಂತ್ರಸ್ಥರಿಗೆ ಆದಷ್ಟು ಬೇಗ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಲುಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು.

Facebook Comments

Sri Raghav

Admin