ಗದಗ ಜಿಲ್ಲೆಗೆ ‘ರಾಷ್ಟ್ರೀಯ ಪ್ರಶಸ್ತಿ’, ಯಾವ ವಿಷಯದಲ್ಲಿ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Gadag-Dist--01

ಬೆಂಗಳೂರು, ಜ.16 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ “ಬೇಟಿ ಬಚಾವೋ – ಬೇಟಿ ಪಡಾವೋ” ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ದೇಶದ 25 ಜಿಲ್ಲೆಗಳಲ್ಲಿ ಗದ ಸಹ ಆಯ್ಕೆಯಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ.

ಈ ಸಾಧನೆ ಸಕಾರಗೊಳ್ಳುವುದರಲ್ಲಿ ಶ್ರಮಿಸಿದ ಸರ್ವರಿಗೂ, ಜಿಲ್ಲಾಡಳಿತಕ್ಕೂ ತಮ್ಮ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರಿಗೂ ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಇಲಾಖಾ ಸಚಿವೆ ಡಾ ಜಯಮಾಲ ರಾಮಚಂದ್ರ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಅಲ್ಲದೆ ಈ ರಾಷ್ಟ್ರೀಯ ಪುರಸ್ಕಾರ ಇನ್ನಷ್ಟು ಉತ್ಸಾಹದಿಂದಕೆಲಸಮಾಡಲು ಪ್ರೇರಣೆ ಎಂದಿದ್ದಾರೆ. ಜನವರಿ 24 ರಂದು ನವದೆಹಲಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಹಮ್ಮಿಕೊಂಡಿದ್ದು ಅಂದು ಈ ಪ್ರಶಸ್ತಿಯನ್ನು ನೀಡಲಾಗುವುದು.

ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಬಿಬಿಬಿಪಿ ಯೋಜನೆಯ ಉಪಕಾರ್ಯದರ್ಶಿ ಅಶೋಕ ಕುಮಾರ ಯಾದವ ಅವರು, ಯೋಜನೆಯಡಿ ಉತ್ತಮ ಕಾರ್ಯನಿರ್ವಹಿಸಿ ರಾಷ್ಟ್ರ ಮನ್ನಣೆ ಪಡೆದ 25 ಜಿಲ್ಲೆಗಳಲ್ಲಿ ಗದಗ ಜಿಲ್ಲೆಯು ಸ್ಥಾನ ಪಡೆದಿರುವ ಕುರಿತು ಪತ್ರದ ಮೂಲಕ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ.

ನವದೆಹಲಿಯ ಚಾಣಕ್ಯಪುರಿಯ ಪ್ರವಾಸಿ ಭಾರತೀಯ ಕೇಂದ್ರದಲ್ಲಿ ಜ. 24ರಂದು ಜರುಗುವ ರಾಷ್ಟ್ರೀಯ ಹೆಣ್ಣುಮಗು ದಿನಾಚರಣೆ ಹಾಗೂ ಯೋಜನೆಯ 4ನೇ ವರ್ಷಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕಾರಕ್ಕೆ ಭಾಗವಹಿಸಲು ಜಿಲ್ಲಾಧಿಕಾರಿಗಳನ್ನು ಆಹ್ವಾನಿಸಲಾಗಿದೆ.

ಸ್ವಚ್ಛ ಭಾರತದಲ್ಲೂ ಮನ್ನಣೆ: ವಿಶ್ವ ಶೌಚಗೃಹ ದಿನಾಚರಣೆ ಅಂಗವಾಗಿ ದೇಶಾದ್ಯಂತ ಜಿಲ್ಲೆಗಳಿಗಾಗಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕೈಗೊಂಡ ಸ್ವಚ್ಛ ಭಾರತ ಅಭಿಯಾನ ಹಾಗೂ ವೈಯಕ್ತಿಕ ಶೌಚಗೃಹ ನಿರ್ಮಾಣ ಕಾರ್ಯಗಳು ದೇಶದ ಮೂವತ್ತು ವಿಶೇಷ ಜಿಲ್ಲೆಗಳಲ್ಲಿ ಗದಗ ಜಿಲ್ಲೆಯು ಏಳನೇ ಸ್ಥಾನ ಪಡೆಯಲು ಸಹಕಾರಿಯಾಗಿತ್ತು. ಇದೀಗ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಪರಿಣಾಮ ರಾಷ್ಟ್ರ ಮನ್ನಣೆ ದೊರಕಿರುವುದು ಜಿಲ್ಲೆಗೆ ಮತ್ತೊಂದು ಗರಿ ಮೂಡಿದಂತಾಗಿದೆ.

Facebook Comments

Sri Raghav

Admin