ಮತ್ತೊಬ್ಬ ಬಂಡಾಯ ಶಾಸಕ ರಾಜೀನಾಮೆ, ಕೇಜ್ರಿವಾಲ್‍ಗೆ ಮತ್ತೊಂದು ಶಾಕ್

ಈ ಸುದ್ದಿಯನ್ನು ಶೇರ್ ಮಾಡಿ

aapಚಂಡೀಘಡ್,ಜ.16(ಪಿಟಿಐ)- ಆಮ್ ಆದ್ಮಿ ಪಾರ್ಟಿ(ಎಎಪಿ)ಯ ಪಂಜಾಬ್‍ನ ಬಂಡಾಯ ಶಾಸಕ ಬಲದೇವ್‍ಸಿಂಗ್ ಇಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯಿಂದ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಮತ್ತೊಂದು ಹಿನ್ನಡೆಯಾಗಿದೆ.

ಜ.8ರಂದು ಪಂಜಾಬ್‍ನ ಬಂಡಾಯ ಶಾಸಕ ಸುಖ್‍ಪಾಲ್ ಸಿಂಗ್ ಖೈರಾ ರಾಜೀನಾಮೆ ನೀಡಿದ್ದರು. ಈಗ ಬಲ್‍ದೇವ್ ಸಿಂಗ್ ತ್ಯಾಗಪತ್ರ ಸಲ್ಲಿಸಿರುವು ದರಿಂದ ಪಕ್ಷಕ್ಕೆ ಧಕ್ಕೆಯಾಗಿದೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಬಲ್‍ದೇವ್ ಸಿಂಗ್, ಎಎಪಿ ತನ್ನ ತತ್ವಾದರ್ಶಗಳಿಗೆ ತಿಲಾಂಜಲಿ ನೀಡಿದೆ. ಕೇಜ್ರಿವಾಲ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇವುಗಳಿಂದ ಬೇಸತ್ತು ತಾವು ಪಕ್ಷದಿಂದ ಹೊರ ಬರುವುದಾಗಿ ತಿಳಿಸಿದ್ದಾರೆ.

Facebook Comments