ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಗೌಡರು ಮತ್ತು ಸಿದ್ದರಾಮಯ್ಯ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Swamiji--01

ತುಮಕೂರು. ಜ. 16 : ಆಸ್ಪತ್ರೆಯಿಂದ ಮಠಕ್ಕೆ ಆಗಮಿಸಿದ ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ವಿಚಾರಿಸಲು ಇಂದು ರಾಜಕೀಯ ಮುಖಂಡರು ಸಾಲುಗಟ್ಟಿ ನಿಂತಿದ್ದರು , ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಹೆಚ್ ಕೆ ಪಾಟೀಲ್, ಸೇರಿದಂತರೇ ಹಲವು  ನಾಯಕರು ಸ್ವಾಮೀಜಿಯವರ ಆರೋಗ್ಯ ವಿಚಾರಿಸಿದರು.

ಸಿದ್ದಗಂಗಾ ಮಠಕ್ಕೆ ಮಾಜಿ ಸಿಎಂ ಹಾಗೂ ಸಲಹಾ ಸಮಿತಿ ಸಮಿತಿಯ ಅಧ್ಯಕ್ಷರು ಅದ ಸಿದ್ದರಾಮಯ್ಯನವರು ಬೇಟಿ ಅರೋಗ್ಯ ವಿಚಾರಿಸಿದರು. ನಂತರ ಕಿರಿಯ ಶ್ರೀ ಗಳಾದ ಸಿದ್ದಲಿಂಗಾ ಸ್ವಾಮೀಜಿ ಯವರು ಜೂತೆ 40 ನಿಮಿಷ ಕಾಲ ಸುದೀರ್ಘ ಚರ್ಚೆ ನಡೆಸಿದರು.

ಡಾ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಕಣ್ಣು ಬಿಟ್ಟು ನೋಡುತ್ತಿದ್ದಾರೆ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಅವರ ಆರೋಗ್ಯದಲ್ಲಿ ಪ್ರೊಟೀನ್ ಅಂಶ ಉತ್ಪತ್ತಿಯಾಗುತ್ತಿದೆ ಅದರೆ ಅವರ ಉಸಿರಾಟದಲ್ಲಿ ಕೂಂಚ ತೂಂದರೆ ಅಗಿರುವ ಪರಿಣಾಮ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯನವರನ್ನು ತಿಳಿಸಿದರು.

ಜಗತ್ತಿಗೆ ಜಗದ್ಗುರು ವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ ಮಹಾನ್ ಪುರುಷರಾದ ಇವರು ಸೇವೆ ನಾಡಿಗೆ ನಮಗೆ ಇನ್ನು ಬೇಕಾಗಿದೆ ಬೇಗ ಸ್ವಾಮೀಜಿ ಅವರು ಗುಣ ಮುಖ ರಾಗುತ್ತಾರೆ ಎಂಬ ವಿಶ್ವಾಸ ಇದೇ ಅದಕ್ಕೆ ಭಗವಂತನ ಪ್ರಾರ್ಥಿಸುತ್ತೇನೆ ಎಂದರು.

ನಾನು ಮುಖ್ಯಮಂತ್ರಿ ಅಗಿದ್ದಾಗ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಶಿಪಾರಸ್ಸು ಮಾಡಿದ್ದೆ ಈಗ ಮಾಡಲ್ಲವೇ ಎಂದು ಸುದ್ದಿಗಾರರು ಕೇಳಿ ದ ಪ್ರಶ್ನೆಗೆ ಉತ್ತರಿಸಿದ ಅವರು ಸ್ವಾಮೀಜಿ ಅವರು ಆರೋಗ್ಯದಲ್ಲಿ ಬೇಗ ಚೇತರಿಕೆ ಕಾಣಲಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದರು.

ಅಲ್ಲದೆ ಬಕ್ತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅವಶ್ಯಕತೆ ಕೆಲವರು ಸುಮ್ಮನೆ ಅಪ ಪ್ರಚಾರ ಮಾಡುತ್ತಾರೆ ಅದಕ್ಕೆ ಕಿವಿ ಗೂಡ ಬೇಡಿ ಎಂದು ಅವರು ಮನವಿ ಮಾಡಿದರು ಇದೇ ಸಂದರ್ಭದಲ್ಲಿ ಅಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಜಮೀರ್ ಅಹಮದ್ ಅವರು ಸಾಥ್ ನೀಡಿದರು.

ಸ್ವಾಮೀಜಿಯವರ ಆರೋಗ್ಯ ವಿಚಾರಿಸಿದ ದೇವೇಗೌಡರು ಮಾತನಾಡಿ ಗುರುಗಳಿಗೆ 111 ವರ್ಷವಾಗಿದೆ, ಸ್ವಾಭಾವಿಕವಾಗಿ ಕೆಲ ಆರೋಗ್ಯ ಏರುಪೇರು ಸಹಜ, ಇಷ್ಟು ವರ್ಷ ಅವರು ಈ ಪೀಠದಲ್ಲಿ 89 ವರ್ಷ ಸೇವೆ ಸಲ್ಲಿಸಿದ್ದಾರೆ, ಲಕ್ಷಾಂತರ ಮಕ್ಕಳುಗೆ ವಿದ್ಯಾ ಅನ್ನ ದಾಸಹೋಹ ಮಾಡಿ ಪ್ರಪಂಚದಗಲ ಹೆಸರುವಾಸಿಯಾಗಿದ್ದಾರೆ, ಹಲವಾರು ರೀತಿ ಧಾರ್ಮಿಕ ಉಪನ್ಯಾಸ ಮಾಡಿದ್ದಾರೆ, ಅವರ ಚೇತನ ಧಾರ್ಮಿಕ ಕಾರ್ಯಕ್ರಮ, ನಿತ್ಯ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದಾರೆ , ಅಷ್ಟೊಂದಯ ಅಧ್ಬುತವಾಗಿ ಕೆಲಸ ಮಾಡಲು ದೈವ ಅನುಗ್ರಹ ಹಾಗಾಗಿ, ಅವರು ನಡೆದಾಡುವ ದೇವರು ಎನ್ನುವ‌ಬಿರುದಿಗೆ ಭಾಜನರಾಗಿದ್ದಾರೆ ಎಂದರು.

ಪ್ರಕೃತಿ ನಿಯಮದಂತೆ ಪುನರಪಿ ಜನನ ಪುನರಪಿ ಮರಣ ಎಂಬಂತೆ ಮೋಕ್ಷಕ್ಕೆ ದಾರಿ ಮಾಡಿಕೊಂಡಿದ್ದಾರೆ, ಇದು ಅವರು ಪರಮಾತ್ಮ ಸಾನಿಧ್ಯಕ್ಕೆ ಹೋಗುವ ಸಮಯ, ಆರೋಗ್ಯದಲ್ಲಿ ಏರುಪೇರಾದರೂ ಭಗವಂತನ ಅನುಗ್ರಹದಿಂದ ಜಯಿಸಿಜೊಂಡು ಬಂದಿದ್ದಾರೆ ಎಂದರು.

ನಾವು ಹಲವಾರು ಬಾರಿ ಶ್ರೀಗಳ ಜೊತೆ ಕುಳಿತು ಊಟ ಮಾಡಿದ್ದೇವೆ   ಅದು ನನ್ನ ನೆನಪು, ಈ ಪುಣ್ಯಕಾಲದಲ್ಲಿ ದರ್ಶನ ಮಾಡಲು ಬಂದೆ ದರ್ಶನ ಆಗಿದೆ, ಭಗವಂತ ಯಾವಾಗ ತೀರ್ಮಾನ ಮಾಡ್ತಾಬೋ ನಮಗೆ ಗೊತ್ತಿಲ್ಲಾ, ಇನ್ನೂ ಉಸಿರಾಡುವ‌ಶಕ್ತಿ ಶ್ರಿ ಗಳಿಗೆ ಇದೆ, ಎಂದು ವೈದ್ಯರು ಹೇಳಿದ್ದಾರೆ, ಬಿಪಿ ಶುಗರ್ ಎಲ್ಲವೂ ನಾರ್ಮಲ್ ಅಗಿದೆ ಎಂದು ಅವರು ತಿಳಿಸಿದರು.

ಭಕ್ತರನ್ನು ನ್ಯೂನಿಯಂತ್ರಿಸಲು ಪೊಲೀಸರ ಹರಸಾಹಸ :
ಮಠದಲ್ಲಿ ಹೆಚ್ಚಿದ ಬಕ್ತರ ಸಂಖ್ಯೆ ನೆರೆದಿದ್ದು ಅವರನ್ನು ನಿಯಂತ್ರಿಸಲು ಫೋಲಿಸರು ಹರ ಸಾಹಸ ಪಡುತ್ತಿದ್ದಾರೆ. ಶ್ರೀಗಳ ದರ್ಶನಕ್ಕೆ ಭಕ್ತರು ಒತ್ತಡ ಹಾಕುತ್ತಿದ್ದಾರೆ. ಶ್ರೀಗಳ ದರ್ಶನಕ್ಕೆ ಅವಕಾಶ ನೀಡಬೇಕೆದು ಹಠ ಹಿಡಿದ್ದಾರೆ.

Facebook Comments

Sri Raghav

Admin