ತೆಲಂಗಾಣದಲ್ಲಿ ಒಕ್ಕೂಟ ರಂಗ ಸ್ಥಾಪನೆಗೆ ವೇದಿಕೆ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

TRS- YSRಹೈದರಾಬಾದ್, ಜ.16 (ಪಿಟಿಐ)- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷಗಳ ನಡುವೆ ಮೈತ್ರಿ ಕೂಟದ ರಾಜಕೀಯ ಧೃವೀಕರಣಕ್ಕೆ ಚಾಲನೆ ದೊರೆತಿರುವಾಗಲೇ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‍ಎಸ್) ಮತ್ತು ವೈಎಸ್‍ಆರ್ ಕಾಂಗ್ರೆಸ್ ಪಕ್ಷಗಳ ನಡುವೆ ಒಕ್ಕೂಟ ರಂಗ ರಚನೆ ಮಾತುಕತೆಗೆ ವೇದಿಕ ಸಜ್ಜಾಗಿದೆ.

ತೆಲಂಗಾಣದಲ್ಲಿ ಬಿಜೆಪಿಯೇತರ ಮತ್ತು ಕಾಂಗ್ರೆಸ್ಸೇತರ ಒಕ್ಕೂಟ ರಂಗವನ್ನು ರಚಿಸಲು ಕಸರತ್ತು ಮುಂದುವರೆಸಿರುವ ಟಿಆರ್‍ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಈ ಸಂಬಂಧ ವೈಎಸ್‍ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್.ಜಗನ್ಮೋಹನ್‍ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ.

ಈ ಸಂಬಂಧ ತಮ್ಮ ಪುತ್ರ ಹಾಗೂ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಮತ್ತು ಪಕ್ಷದ ಇತರ ನಾಯಕರನ್ನು ರೆಡ್ಡಿ ಜೊತೆ ಮಾತನಾಡಲು ನಿಯೋಜಿಸಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಇಂದು ಸಂಜೆ ಅಥವಾ ನಾಳೆ ಈ ಸಂಬಂಧ ಮಹತ್ವದ ಮಾತುಕತೆ ನಡೆಯಲಿದ್ದು, ಚರ್ಚೆ ಫಲಪ್ರದವಾದರೆ ಪ್ರಾದೇಶಿಕ ಪಕ್ಷಗಳ ಒಕ್ಕೂಟ ರಂಗವೊಂದು ಅಸ್ತಿತ್ವಕ್ಕೆ ಬರಲಿದೆ.

Facebook Comments