ಶಸ್ತ್ರಾಸ್ತ್ರ ತೋರಿಸಿ ರೈಲು ಪ್ರಯಾಣಿಕರನ್ನು ದೋಚಿದ ಡಕಾಯಿತರು

ಈ ಸುದ್ದಿಯನ್ನು ಶೇರ್ ಮಾಡಿ

Delhi-Train--01

ನವದೆಹಲಿ, ಜ.17-ಜಮ್ಮು-ದೆಹಲಿ ದುರೊಂಟೋ ಎಕ್ಸ್‍ಪ್ರೆಸ್ ರೈಲಿನ ಮೇಲೆ ದಾಳಿ ನಡೆಸಿದ ಶಸ್ತ್ರಸಜ್ಜಿತರ ಗುಂಪೊಂದು ಪ್ರಯಾಣಿಕರನ್ನು ಬೆದರಿಸಿದ ಲಕ್ಷಾಂತರ ರೂ. ಮೌಲ್ಯದ ಹಣ, ಚಿನ್ನಾಭರಣ, ಮೊಬೈಲ್ ಪೋನ್‍ಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಡಕಾಯಿತಿ ಮಾಡಿ ಪರಾರಿಯಾಗಿರುವ ಘಟನೆ ದೆಹಲಿ ಸರೈ ರಹಿಲ್ಲಾ ನಿಲ್ದಾಣದ ಬಳಿ ಇಂದು ಮುಂಜಾನೆ ನಡೆದಿದೆ.

ಏಳರಿಂದ ಎಂಟು ಜನರಿದ್ದ ಡಕಾಯಿತ ತಂಡವೊಂದು 3.30ರ ನಸುಕಿನಲ್ಲಿ 12,266 ಸಂಖ್ಯೆಯ ಜಮ್ಮು-ದೆಹಲಿ ದುರೊಂಟೋ ಎಕ್ಸ್‍ಪ್ರೆಸ್ ರೈಲಿನ ಬಿ-3 ಮತ್ತು ಬಿ-8 ಕೋಚ್‍ಗಳ ಅನೇಕ ಪ್ರಯಾಣಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಹಣ, ಚಿನ್ನಾಭರಣ, ಮೊಬೈಲ್‍ಗಳು, ಪರ್ಸ್‍ಗಳು, ಬ್ಯಾಗ್‍ಗಳು ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಡಕಾಯಿತಿ ಮಾಡಿದ್ದಾರೆ ಎಂದು ರೈಲ್ವೆ ಇಲಾಖೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ನಿಲ್ದಾಣದ ಬಳಿ ನಿರ್ದಿಷ್ಟ ಸಮಯದಲ್ಲಿ ರೈಲು ನಿಲುಗಡೆಯಾಗುವ ಬಗ್ಗೆ ಮಾಹಿತಿ ತಿಳಿದಿದ್ದ ಡಕಾಯಿತರು ಪೂರ್ವ ಯೋಜನೆ ರೂಪಿಸಿ ಈ ಕೃತ್ಯ ಎಸಗಿದ್ದಾರೆ.

20 ನಿಮಿಷ ರೈಲು ನಿಲುಗಡೆಯಾಗಿದ್ದಾಗ ಬೋಗಿಗಳ ಒಳಗೆ ನುಗ್ಗಿದ ಡಕಾಯಿತರ 15 ನಿಮಿಷಗಳಲ್ಲಿ ಡಕಾಯಿತಿ ನಡೆಸಿ ಕತ್ತಲಲ್ಲಿ ಪರಾರಿಯಾದರು. ಈ ಬಗ್ಗೆ ಅಶ್ವಿನ್ ಕುಮಾರ್ ಎಂಬ ಪ್ರಯಾಣಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

Facebook Comments