ಪ್ರತಿಭಾನ್ವಿತ ಯುವ ಜನತೆಯ ಕನಸುಗಳುಳನ್ನು ಈಡೇರಿಸಲು ಬಿಜೆಪಿ ಬದ್ಧ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

modiನವದೆಹಲಿ, ಜ.17-ದೇಶದ ಪ್ರತಿಭಾನ್ವಿತ ಯುವಕ-ಯುವತಿಯರ ಕನಸುಗಳು ಮತ್ತು ಆಶೋತ್ತರಗಳನ್ನು ಈಡೇರಿಸಲು ಬಿಜೆಪಿ ಸಂಪೂರ್ಣ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿಯನ್ನಾಗಿ ಮಾಡಲು ಬಿಜೆಪಿ ಯುವ ಮೋರ್ಚಾ ತಮ್ಮ ಪ್ರಚಾರಾಂದೋಲನ ಬಿರುಸುಗೊಳಿಸಿರುವ ಸಂದರ್ಭದ್ಲಲೇ ಮೋದಿ ಯುವ ಜನಾಂಗಕ್ಕೆ ಈ ಆಶ್ವಾಸನೆ ನೀಡಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಲು ದೇಶಾದ್ಯಂತ ಯುವ ಶಕ್ತಿಯನ್ನು ಸಂಘಟಿಸುತ್ತಿರುವ ಉತ್ಸಾಹಿ ಭಾರತೀಯ ಜನತಾ ಯುವ ಮೋರ್ಚಾ (ಬಿಜೆಎಂವೈ) ತಂಡದ ವಿಜಯ್‍ಲಕ್ಷ್ಯ-2019ರ ಆಂದೋಲನಕ್ಕೆ ನಾನು ಅಭಿನಂದನೆ ಸಲ್ಲಿಸಿ ಶುಭ ಕೋರುತ್ತೇನೆ ಎಂದು ಮೋದಿ ಟ್ವಿಟರ್‍ನಲ್ಲಿ ಹೇಳಿದ್ಧಾರೆ.

ನಮ್ಮ ದೇಶದ ಪ್ರತಿಭಾನ್ವಿತ ಯುವಜನಾಂಗದ ಕನಸುಗಳು ಮತ್ತು ಆಶೋತ್ತರಗಳನ್ನು ಈಡೇರಿಸಲು ಬಿಜೆಪಿ ಸಂಪೂರ್ಣ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಲಕ್ಷ್ಯ ಹಮಾರಾ, ಮೋದಿ ದೋಬಾರ(ನಮ್ಮ ಗುರಿ, ಮೋದಿ ಮತ್ತೊಮ್ಮೆ) ಎಂಬ ಘೋಷವಾಕ್ಯದೊಂದಿಗೆ ದೇಶದ ಯುವ ಮತದಾರರನ್ನು ಬಿಜೆಪಿಯತ್ತ ಸೆಳೆಯಲು ಬಿಜೆವೈಂ ಅಧ್ಯಕ್ಷೆ ಪೂನಂ ಮಹಾಜನ್ ನೇತೃತ್ವದಲ್ಲಿ ತಂಡವು 17 ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ ದೇಶಾದ್ಯಂತ ಅಭಿಯಾನ ಆರಂಭಿಸಿದೆ. ಇದಕ್ಕೆ ವಿಜಯ ಲಕ್ಷೈ-2019 ಎಂದು ಹೆಸರಿಡಲಾಗಿದೆ.

Facebook Comments