ಆಪರೇಷನ್ ಕಮಲ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Congress-Protest--01

ಬೆಂಗಳೂರು,ಜ.17- ಮೈತ್ರಿ ಸರ್ಕಾರ ಪತನಗೊಳಿಸುವ ಬಿಜೆಪಿಯ ಆಪರೇಷನ್ ಕಮಲ ಖಂಡಿಸಿ ಬೆಂಗಳೂರು ಮಹಾನಗರದ ಮೂರು ಘಟಕಗಳ ಕಾಂಗ್ರೆಸ್ ಕಾರ್ಯಕರ್ತರು ಇಂದು ಆನಂದ್‍ರಾವ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಸಚಿವ ಯು.ಟಿ.ಖಾದರ್, ಮುಖಂಡರಾದ ಜಿ.ಎ.ಭಾವ, ಉದಯ್ ಶಂಕರ್, ಜಿ.ಶೇಖರ್,ರಾಜ್‍ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್, ಮೈತ್ರಿ ಸರ್ಕಾರವನ್ನು ಪತನಗೊಳಿಸುವ ಬಿಜೆಪಿಯ ಯಾವುದೇ ಪ್ರಯತ್ನಗಳು ಫಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಕೂಡಾ ಇಂತಹ ಪ್ರಯತ್ನಗಳಿಗೆ ಕೈ ಹಾಕಿ ಮುಖಭಂಗ ಅನುಭವಿಸಿತ್ತು. ಈಗಲೂ ಅದೇ ಕೆಲಸಕ್ಕೆ ಮುಂದಾಗಿದ್ದು, ಶಾಸಕರನ್ನು ಸೆಳೆಯಲು ಆಮೀಷ ಒಡ್ಡಲಾಗುತ್ತಿದೆ.ಆದರೆ ಯಾರೂ ಬಿಜೆಪಿ ತೆಕ್ಕೆಗೆ ಬೀಳುತ್ತಿಲ್ಲ ಎಂದರು.

ಬಿಬಿಎಂಪಿಯ ನಾಲ್ವರು ಸದಸ್ಯರನ್ನೇ ಸೆಳೆಯಲಾರದವರು, ಇನ್ನು 15 ಮಂದಿ ಶಾಸಕರನ್ನು ಸೆಳೆಯಲು ಸಾಧ್ಯವೇ ಎಂದ ಅವರು, ಬಿಜೆಪಿಗರನ್ನು ಯಾರೂ ನಂಬುವುದಿಲ್ಲ ಎಂದು ಕಿರಿಡಿಕಾರಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಇಂತಹ ಆಟಗಳನ್ನು ಆಡುತ್ತಿದೆ ಎಂದರು. ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರೂ ಬಿಜೆಪಿಯ ಆಪರೇಷನ್ ಕಮಲವನ್ನು ಕಟುವಾದ ಮಾತುಗಳಿಂದ ಖಂಡಿಸಿದ್ದಾರೆ.

Facebook Comments