ಆಡಿನ ಹಾಲು ತಾಯಿ ಹಾಲಿನಷ್ಟೇ ಶೇಷ್ಠ ಎಂಬುದಕ್ಕೆ ಇಲ್ಲಿವೆ 10 ಕಾರಣ ..!

ಈ ಸುದ್ದಿಯನ್ನು ಶೇರ್ ಮಾಡಿ

Goatಆಡು ಬಡವರ ಹಸು. ಆಡು ಸಾಕಾಣಿಕೆ ಸಣ್ಣ ರೈತರ ಜೀವನೋಪಾಯಕ್ಕೆ ಸೂಕ್ತವಾದ ಉದ್ದಿಮೆ, ಹಸುವನ್ನು ಕೊಳ್ಳಲಾಗದ ಒಬ್ಬ ಬಡ ರೈತನ ಪಾಲಿಗೆ ಆಡು ಕಾಮಧೇನು. ಆಡಿನ ಹಾಲು ತಾಯಿಯ ಹಾಲಿನಷ್ಠೆ ಪೌಷ್ಠಿಕತೆ ಹೊಂದಿದ್ದು, ಒಂದು ಸಮತೋಲನ ಆಹಾರದ ಮೂಲವಾಗಿದೆ.

ಮನುಷ್ಯರಲ್ಲಿ ತಾಯಿ ಹಾಲಿನಲ್ಲಿರುವ ಪೋಷಕಾಂಶಗಳೆಲ್ಲ ಆಡಿನ ಹಾಲಿನಲ್ಲಿರುತ್ತವೆ, ಅಲ್ಲದೆ ಆಡಿನ ಹಾಲು ಸರಳವಾಗಿ  ಜೀರ್ಣವಾಗುತ್ತದೆ, ಹೀಗಾಗಿ ಚಿಕ್ಕ ಮಕ್ಕ್ಕಳಿಗೆ ತಾಯಿ ಹಾಲಿಗೆ ಪರ್ಯಾಯವಾಗಿ ಆಡಿನ ಹಾಲು ಉತ್ತಮ.

ಆಡಿನ ಹಾಲು ಪಾಶ್ಚಾತ್ಯ ದೇಶಗಳಲ್ಲಿ ಅಷ್ಟೊಂದು ಜನಪ್ರಿಯವಲ್ಲದಿದ್ದರೂ ಪ್ರಪಂಚದ ಕೆಲವಾರು ಪ್ರದೇಶಗಳಲ್ಲಿ ಅನಿವಾರ್ಯ ಅಥವಾ ಮೆಚ್ಚಿನ ಹಾಲೇ ಆಗಿದೆ. ಕೆಲವು ಸಂಶೋಧನೆಗಳ ಪ್ರಕಾರ ಆರೋಗ್ಯಕ್ಕೆ ಹಸುವಿನ ಹಾಲಿಗಿಂತಲೂ ಆಡಿನ ಹಾಲೇ ಹೆಚ್ಚು ಪ್ರಯೋಜನಕಾರಿಯಾಗಿದೆ.

 

ವಿಶೇಷವಾಗಿ ಲ್ಯಾಕ್ಟೋಸ್ ಸಹಿಸದ ವ್ಯಕ್ತಿಗಳು ಹಸುವಿನ ಹಾಲನ್ನು ಕುಡಿಯಲು ಸಾಧ್ಯವಾಗದಿದ್ದರೂ ಆಡಿನ ಹಾಲನ್ನು ಯಾವುದೇ ತೊಂದರೆಯಿಲ್ಲದೇ ಸೇವಿಸಬಹುದು. ಆಡಿನ ಹಾಲಿನಲ್ಲಿರುವ ಹೆಚ್ಚಿನ ಪ್ರಮಾಣದ ಕೊಬ್ಬಿನ ಆಮ್ಲಗಳೇ ಇದಕ್ಕೆ ಕಾರಣ.

ಈ ಹಾಲಿನಲ್ಲಿ ಪ್ರೋಟೀನು, ಕಾರ್ಬೋಹೈಡ್ರೇಟು, ಸಕ್ಕರೆ, ಸೋಡಿಯಂ, ಕ್ಯಾಲ್ಸಿಯಂ, ಗಂಧಕ, ಪೊಟ್ಯಾಶಿಯಂ, ವಿಟಮಿನ್ ಎ, ವಿಟಮಿನ್ ಬಿ2, ವಿಟಮಿನ್ ಸಿ ಹಾಗೂ ವಿಟಮಿನ್ ಡಿ ಸಮೃದ್ಧವಾಗಿವೆ. ಈ ಹಾಲಿನ ಸೇವನೆಯಿಂದ ಉರಿಯೂತ ತಕ್ಷಣ ಕಡಿಮೆಯಾಗುತ್ತದೆ, ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ, ಮೂಳೆಗಳು ದೃಢಗೊಳ್ಳುತ್ತವೆ, ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ ಹಾಗೂ ತೂಕ ಇಳಿಕೆಗೂ ನೆರವಾಗುತ್ತದೆ.

1. ಮೂಳೆಗಳನ್ನು ದೃಢಗೊಳಿಸುತ್ತದೆ ಆಡಿನ ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಸುಮಾರು ಒಂದು ಕಪ್ ಹಾಲಿನಲ್ಲಿ 327 ಮಿಲಿಗ್ರಾಂ ಕ್ಯಾಲ್ಸಿಯಂ ಇದ್ದು ಹಸುವಿನ ಹಾಲಿಗಿಂತಲೂ ಹೆಚ್ಚಾಗಿದೆ. ಈ ಪ್ರಮಾಣ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಶಿಥಿಲವಾಗುವ ಎಂಬ ಸ್ಥಿತಿಯಿಂದ ರಕ್ಷಿಸುತ್ತದೆ ಹಾಗೂ ಮೂಳೆಗಳಿಗೆ ಸಂಬಂಧಿಸಿದ ಇತರ ತೊಂದರೆಗಳನ್ನೂ ನಿವಾರಿಸುತ್ತದೆ. ತನ್ಮೂಲಕ ಮೂಳೆ ಮತ್ತು ಹಲ್ಲುಗಳನ್ನು ದೃಢಗೊಳಿಸುತ್ತದೆ.

2. ಜೀರ್ಣಕ್ರಿಯೆಗೆ ಸಹಕರಿಸುತ್ತದೆ ಆಡಿನ ಹಾಲಿನಲ್ಲಿರುವ ಕೊಬ್ಬಿನ ಆಮ್ಲಗಳು ನಮ್ಮ ದೇಹ ಸುಲಭವಾಗಿ ಜೀರ್ಣಿಸಿಕೊಳ್ಳುವಂತಿವೆ. ಆಡಿನ ಹಾಲನ್ನು ಕುಡಿದಾಗ ಇದರಲ್ಲಿರುವ ಪ್ರೋಟೀನು ತಕ್ಷಣ ಈ ಹಾಲನ್ನು ಮೊಸರಾಗಿಸಿ ತೆಳುವಾದ ಪದರವೊಂದನ್ನು ನಿರ್ಮಿಸುತ್ತದೆ. ಈ ಮೊಸರನ್ನು ಜೀರ್ಣಿಸಿಕೊಳ್ಳುವುದು ಜೀರ್ಣಾಂಗಗಳಿಗೆ ಸುಲಭ. ಹಸುವಿನ ಹಾಲನ್ನು ಜೀರ್ಣಿಸಿಕೊಳ್ಳುವಾಗ ಕೆಲವೊಮ್ಮೆ ಹೊಟ್ಟೆಯಲ್ಲಿ ಉರಿ ಎದುರಾಗುತ್ತದೆ. ಆದರೆ ಆಡಿನ ಹಾಲಿನಲ್ಲಿ ಈ ಸಂಭವವೇ ಎದುರಾಗದು.

3. ಹೃದಯವನ್ನು ರಕ್ಷಿಸುತ್ತದೆ ಆಡಿನ ಹಾಲಿನಲ್ಲಿರುವ ಕೊಬ್ಬಿನ ಆಮ್ಲಗಳು ದೇಹದಲ್ಲಿ ಎದುರಾಗುವ ಕೊಲೆಸ್ಟ್ರಾಲ್ ನ ಸಮತೋಲನವನ್ನು ಕಾಪಾಡಲು ನೆರವಾಗುತ್ತದೆ. ಈ ಮೂಲಕ ಹೃದಯದ ಕಾಯಿಲೆಗಳಾದ ಹೃದಯ ಸ್ತಂಭನ, ಅಥೆರೋಸ್ಕ್ಲೆರೋಸಿಸ್ ಹಾಗೂ ಇತರ ರಕ್ತನಾಳ ಸಂಬಂಧಿತ ಕ್ಲಿಷ್ಟತೆಗಳಿಂದ ಹೃದಯವನ್ನು ಕಾಪಾಡುತ್ತದೆ. ಆಡಿನ ಹಾಲಿನಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿದ್ದು ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಿ ಹೃದಯದ ಮೇಲಿನ ಭಾರವನ್ನು ಇಳಿಸುತ್ತದೆ.

4. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಆಡಿನ ಹಾಲಿನಲ್ಲಿ ಹಲವಾರು ಸೋಂಕುಗಳನ್ನು ಎದುರಿಸಿ ಇವುಗಳಿಂದ ಎದುರಾಗುವ ಕಾಯಿಲೆಯ ವಿರುದ್ಧ ರಕ್ಷಣೆ ಒದಗಿಸುವ ಶಕ್ತಿ ಇದೆ. ಇದಕ್ಕೆಲ್ಲಾ ಈ ಹಾಲಿನಲ್ಲಿ ಸಮೃದ್ಧವಾಗಿರುವ ಸೆಲೆನಿಯಂ ಕಾರಣ. ಈ ಅಪರೂಪದ ಖನಿಜ ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಸಮರ್ಪಕ ಕಾರ್ಯನಿರ್ವಹಣೆಗೆ ಪ್ರಮುಖವಾಗಿ ಅಗತ್ಯವಾಗಿದೆ.

ಆಡಿನ ಹಾಲಿನ ನಿತ್ಯದ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಅತ್ಯುತ್ತಮವಾಗಿರುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

5. ಉರಿಯೂತ ನಿವಾರಕಾ ಗುಣ ಆಡಿನ ಹಾಲಿನಲ್ಲಿರುವ ಉರಿಯೂತ ನಿವಾರಕ ಗುಣ ಜಠರದಲ್ಲಿ ಎದುರಾಗುವ ಉರಿಯೂತವನ್ನು ತಕ್ಷಣ ನಿವಾರಿಸಿ ಹೊಟ್ಟೆಯ ತಳಮಳವನ್ನು ಕೊನೆಗೊಳಿಸುತ್ತದೆ. ಈ ಹಾಲಿನಲ್ಲಿರುವ ಓಲಿಗೋಸ್ಯಾಖರೈಡ್ಸ್  ಎಂಬ ಕಿಣ್ವ ಈ ಕೆಲಸವನ್ನು ನಿರ್ವಹಿಸುತ್ತದೆ ಹಾಗೂ ಹೊಟ್ಟೆಯಲ್ಲಿ ಉರಿಯೂತದ ಮೂಲಕ ಎದುರಾಗುವ ಕಾಯಿಲೆಗಳಿಂದ ರಕ್ಷಿಸುತ್ತದೆ. ಹಾಗೂ ಈ ಕಿಣ್ವ ಕರುಳುಗಳಲ್ಲಿ ಎದುರಾಗುವ ಉರಿಯೂತವನ್ನೂ ಶಮನಗೊಳಿಸುತ್ತದೆ.

6. ಪೋಷಕಾಂಶ ಹಾಗೂ ಖನಿಜಗಳನ್ನು ಇನ್ನಷ್ಟು ಹೀರಿಕೊಳ್ಳಲು ನೆರವಾಗುತ್ತದೆ ಆಡಿನ ಹಾಲಿನಲ್ಲಿರುವ ಕಬ್ಬಿಣ, ಕ್ಯಾಲ್ಸಿಯಂ, ಗಂಧಕ ಹಾಗೂ ಮೆಗ್ನೀಶಿಯಂ ಜೀರ್ಣಾಂಗಗಳಲ್ಲಿ ಸುಲಭವಾಗಿ ಜೀರ್ಣಗೊಳ್ಳುತ್ತವೆ. ಹಾಗಾಗಿ ನಿತ್ಯವೂ ಆಡಿನ ಹಾಲನ್ನು ಸೇವಿಸುತ್ತಾ ಬರುವ ಮೂಲಕ ದೇಹ ಹೆಚ್ಚು ಕಬ್ಬಿಣ ಮತ್ತು ಇತರ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ತನ್ಮೂಲಕ ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಿ ರಕ್ತಹೀನತೆಯ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

7. ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ ಆಡಿನ ಹಾಲಿನಲ್ಲಿ ಹಸುವಿನ ಹಾಲಿಗಿಂತಲೂ ಹೆಚ್ಚು ಪೋಷಕಾಂಶಗಳಿವೆ. ಒಂದು ಕಪ್ ಆಡಿನ ಹಾಲಿನಲ್ಲಿ ದಿನದ ಅಗತ್ಯದ 20%ದಷ್ಟು ವಿಟಮಿನ್ ಬಿ ಪೋಷಕಾಂಶವನ್ನು ಒದಗಿಸುತ್ತದೆ ಹಾಗೂ ಅಗತ್ಯ ಪ್ರಮಾಣದ ಗಂಧಕ ಮತ್ತು ಪೊಟ್ಯಾಶಿಯಂಗಳನ್ನೂ ಒದಗಿಸುತ್ತದೆ. ದಿನನಿತ್ಯ ಒಂದು ಲೋಟ ಆಡಿನ ಹಾಲು ಕುಡಿಯುವ ಮೂಲಕ ಜೀರ್ಣಾಂಗಗಳಲ್ಲಿ ಎದುರಾಗಿದ್ದ ಉರಿಯನ್ನು ಶಮನಗೊಳಿಸಿ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.

8. ತ್ವಚೆಯನ್ನು ಆರೋಗ್ಯಕರವಾಗಿರಿಸುತ್ತದೆ ಆಡಿನ ಹಾಲಿನಲ್ಲಿರುವ ಕೊಬ್ಬಿನ ಆಮ್ಲ ಹಾಗೂ ಟ್ರೈಗ್ಲಿಸರೈಡುಗಳು ತೇವಕಾರಕ ಗುಣ ಹೊಂದಿದ್ದು ತ್ವಚೆಯನ್ನು ಆರೋಗ್ಯಕರ ಹಾಗೂ ಸುಂದರವಾಗಿ ಕಾಣುವಂತಿರಿಸಲು ನೆರವಾಗುತ್ತದೆ. ಈ ಹಾಲಿನಲ್ಲಿ ವಿಟಮಿನ್ ಎ ಸಹಾ ಅಧಿಕ ಪ್ರಮಾಣದಲ್ಲಿದೆ ಹಾಗೂ ತ್ವಚೆಯ ವರ್ಣವನ್ನು ಸಹಜವರ್ಣಕ್ಕೆ ತರುವಲ್ಲಿ ಮತ್ತು ತ್ವಚೆಯ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಅಷ್ಟೇ ಅಲ್ಲ, ಈ ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ತ್ವಚೆಯ ಹೂರಪದರದಲ್ಲಿ ಸಂಗ್ರಹವಾಗಿದ್ದ ಸತ್ತ ಜೀವಕೋಶಗಳನ್ನು ನಿವಾರಿಸಲೂ ನೆರವಾಗುತ್ತದೆ.

9. ಬೆಳವಣಿಗೆಗೆ ನೆರವಾಗುತ್ತದೆ ಆಡಿನ ಹಾಲಿನಲ್ಲಿರುವ ಉತ್ತಮ ಪ್ರಮಾಣದ ಪ್ರೋಟೀನ್ ಬೆಳವಣಿಗೆಗೆ ಅತ್ಯುತ್ತಮವಾದ ಪೋಷಕಾಂಶವಾಗಿದೆ. ಪ್ರೋಟೀನುಗಳು ದೇಹದ ಪ್ರತಿ ಜೀವಕೋಶದ ಬೆಳವಣಿಗೆಗೆ ಅಡಿಪಾಯವಾಗಿದೆ ಹಾಗೂ ಉತ್ತಮ ಬೆಳವಣಿಗೆ ಪಡೆಯಲು ಉತ್ತಮ ಪ್ರಮಾಣದ ಪ್ರೋಟೀನ್ ಸಹಾ ಬೇಕಾಗುತ್ತದೆ. ನಿತ್ಯವೂ ಆಡಿನ ಹಾಲನ್ನು ಸೇವಿಸುವ ಮೂಲಕ ಉತ್ತಮ ಮತ್ತು ಆರೋಗ್ಯಕರ ಬೆಳವಣಿಗೆಯನ್ನು ಪಡೆಯಬಹುದು.

10. ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ ಕೆಲವು ನಂಬಲರ್ಹ ಅಧ್ಯಯನಗಳಲ್ಲಿ ಕಂಡುಕೊಂಡಿರುವ ಪ್ರಕಾರ ಆಡುಯ ಹಾಲಿನಲ್ಲಿರುವ ಮೇದಸ್ಸುಗಳು ಉದ್ವೇಗವನ್ನು ಕಡೆಮೆಗೊಳಿಸಲು ನೆರವಾಗುತ್ತವೆ. ಅಲ್ಲದೇ ಈ ಹಾಲಿನಲ್ಲಿ ಸಂಯೋಜಿತ ಲಿನೋಲಿಕ್ ಆಮ್ಲವಿದೆ. ಈ ಆಮ್ಲ ಎಲ್ಲಾ ವಯಸ್ಸಿನವರ ಮೆದುಳಿನ ಬೆಳವಣಿಗೆಯನ್ನು ಉತ್ತಮಗೊಳಿಸುತ್ತದೆ. ಆದ್ದರಿಂದ ಮೆದುಳನ್ನು ಚುರುಕುಗೊಳಿಸಬೇಕೆಂದರೆ ಇಂದಿನಿಂದಲೇ ಆಡಿನ ಹಾಲನ್ನು ಕುಡಿಯಲು ಪ್ರಾರಂಭಿಸಿ.

 

Facebook Comments