ಕರ್ನಾಟಕ ಸೇರಿ 12 ರಾಜ್ಯದಲ್ಲಿ ಕೇಂದ್ರೀಯ ವಿವಿ ಸ್ಥಾಪನೆಗೆ ಕೇಂದ್ರ ಸಂಪುಟ ಅಸ್ತು

ಈ ಸುದ್ದಿಯನ್ನು ಶೇರ್ ಮಾಡಿ

Cabinetನವದೆಹಲಿ,ಜ.17- ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ 3,600 ಕೋಟಿ ವೆಚ್ಚದಲ್ಲಿ 13 ಕೇಂದ್ರೀಯ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕೇಂದ್ರ ಸಚಿವ ಪಿಯೂಶ್ ಗೋಯಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೇಂದ್ರೀಯ ವಿವಿ ಕಾಯಿದೆ 2009ರಡಿ ಕರ್ನಾಟಕ, ಕೇರಳ, ತಮಿಳುನಾಡು, ಒಡಿಶಾ, ಪಂಜಾ ಬ್, ರಾಜಸ್ಥಾನ, ಜಾ ರ್ಖಂಡ್, ಹಿಮಾಚಲ ಪ್ರದೇಶದಲ್ಲಿ ತಲಾ ಒಂದೊಂದು ಹಾಗೂ ಜಮ್ಮು ಕಾಶ್ಮೀರದಲ್ಲಿ ಎರಡು ವಿವಿಗಳು ಸ್ಥಾಪನೆಯಾಗಲಿವೆ ಎಂದು ತಿಳಿಸಿದ್ದಾರೆ.

36 ತಿಂಗಳೊಳಗೆ ಈ ಸಂಬಂಧ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದ್ದು, ಕೇಂದ್ರೀಯ ವಿವಿಗಳ ಸ್ಥಾಪನೆಯಿಂದ, ಉನ್ನತ ಶಿಕ್ಷಣ ಲಭ್ಯತೆ ಮತ್ತಷ್ಟು ಮಂದಿಗೆ ವಿಸ್ತರಣೆಗೊಳ್ಳುವುದಲ್ಲದೆ, ಇತರೆ ವಿವಿಗಳಿಗೆ ಮಾದರಿಯಾಗಿ ಈ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

Facebook Comments