ಆಗಸದಲ್ಲಿ ಕ್ಷಿಪಣಿ ದಾಳಿ ನಡೆಸುವಲ್ಲಿ ಎಚ್‍ಎಎಲ್‍ನ ಯುದ್ಧ ಹೆಲಿಕಾಪ್ಟರ್ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

Helicaptrirಚಂಡೀಪುರ್/ಬೆಂಗಳೂರು, ಜ.17-ಗಗನದಲ್ಲಿ ಹಾರಾಟ ನಡೆಸುತ್ತಿರುವಾಗಲೇ ವೈರಿ ಯುದ್ಧವಿಮಾನವನ್ನು ಹೊಡೆದುರುಳಿಸುವ ಅಂತರಿಕ್ಷ ಕ್ಷಿಪಣಿ ದಾಳಿಯಲ್ಲಿ ಎಚ್‍ಎಎಲ್ ನಿರ್ಮಿಸಿರುವ ಹಗುರ ಸಮರ ಹೆಲಿಕಾಪ್ಟರ್ ಯಶಸ್ವಿಯಾಗಿದೆ. ಇದರೊಂದಿಗೆ ಭಾರತದ ವಾಯುಪಡೆ ಬತ್ತಳಿಕೆಗೆ ಮತ್ತೊಂದು ಪ್ರಬಲ ಅಸ್ತ್ರ ಸೇರ್ಪಡೆಯಾದಂತಾಗಿದೆ.

ಒಡಿಸ್ಸಾದ ಚಂಡೀಪುರ್‍ನಲ್ಲಿ ನಡೆದ ಈ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ (ಎಚ್‍ಎಎಲ್) ಸಂಪೂರ್ಣ ದೇಶೀಯವಾಗಿ ನಿರ್ಮಿಸಿರುವ ಹಗುರ ಸಮರ ಹೆಲಿಕಾಪ್ಟರ್ (ಎಲ್‍ಸಿಎಚ್)ನಲ್ಲಿ ಅಳವಡಿಸಲಾಗಿದ್ದ 20 ಎಂಎಂ ಟುರೆಟ್ ಗನ್ ಮತ್ತು 70 ಎಂಎಂ ರಾಕೆಟ್‍ಗಳು ಅಂತರಿಕ್ಷದಲ್ಲಿ ನಿಗದಿತ ಗುರಿಯತ್ತ ಯಶಸ್ವಿ ದಾಳಿ ನಡೆಸಿದವು ಎಂದು ಎಚ್‍ಎಎಲ್ ಪ್ರಕಟಣೆ ತಿಳಿಸಿದೆ.

ವಿಂಗ್ ಕಮಾಂಡರ್ ಸುಭಾಷ್ ಪಿ. ಜಾನ್, ಕರ್ನಲ್ ರಂಜಿತ್ ಚಿಟಾಲೆ ಮತ್ತು ಗ್ರೂಪ್ ಕ್ಯಾಪ್ಟರ್ ರಾಜೀವ್ ದುಬೆ ಅವರನ್ನೊಳಗೊಂಡ ತಂಡ ಪ್ರಾಯೋಗಿಕವಾಗಿ ಎಲ್‍ಸಿಎಚ್ ಮೂಲಕ ಅಂತರಿಕ್ಷ ದಾಳಿ ನಡೆಸಿದರು.

2018ರಲ್ಲಿ ನಡೆದ ಈ ರೀತಿಯ ಪರೀಕ್ಷಾರ್ಥ ದಾಳಿಗಿಂತ ಇದು ಅತ್ಯಾಧುನಿಕವಾಗಿದೆ ಎಂದು ಎಚ್‍ಎಎಲ್ ತಿಳಿಸಿದೆ. ಈ ಹೆಲಿಕಾಪ್ಟರ್‍ನ್ನು ಬೆಂಗಳೂರಿನ ಎಚ್‍ಎಎಲ್‍ನಲ್ಲಿ ಸಂಪೂರ್ಣವಾಗಿ ನಿರ್ಮಿಸಲಾಗಿದೆ.

Facebook Comments