ಮಿಶ್ರ ಸ್ವೀಟ್ ಮಾರ್ಟ್ ಮಾಲೀಕ ಸಂಜಯ್ ಮಿಶ್ರಾ ಮನೆ ಮೇಲೆ ಐಟಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

taxಹುಬ್ಬಳ್ಳಿ, ಜ.17- ಮಿಶ್ರ ಸ್ವೀಟ್ ಮಾರ್ಟ್ ಮಾಲೀಕ ಸಂಜಯ್ ಮಿಶ್ರಾ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಗ್ ಮಿಶ್ರಾ ಸ್ವೀಟ್ ಮಳಿಗೆಗಳನ್ನು ಹೊಂದಿರುವ ಸಂಜಯ್ ಮಿಶ್ರಾ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಕಲ್ಬುರ್ಗಿ ಅವರ ಮನೆ ಮೇಲೂ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

40 ಜನ ಐಟಿ ಅಧಿಕಾರಿಗಳ ನೇತೃತ್ವದ ತಂಡ ಆರು ಕಡೆ ದಾಳಿ ನಡೆಸಿ ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿ ಹುಬ್ಬಳ್ಳಿಗೆ ಬಂದಿಳಿದಿದ್ದ ಐಟಿ ಅಧಿಕಾರಿಗಳು ಬಿಗ್ ಮಿಶ್ರಾದಲ್ಲಿ ಹಣ ಹೂಡಿಕೆ ಮಾಡಿದವರ ಮನೆಗಳ ಮೇಲೂ ಕೂಡ ದಾಳಿ ನಡೆಸಿದ್ದಾರೆ.

Facebook Comments