ಮಾಯಾವತಿ ಮುಂದಿನ ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

mayavatiಕನಕಪುರ, ಜ.17- ಶೋಷಿತ ಸಮುದಾಯಗಳ ನಾಯಕಿಯಾಗಿ ಹೊರಹೊಮ್ಮಿರುವ ಬಿ.ಎಸ್.ಪಿ.ಯ ಅಗ್ರಗಣ್ಯ ನಾಯಕಿ ಮಾಯಾವತಿಯವರು ಮುಂದಿನ ಲೋಕಸಭಾ ಚುನಾವಣೆ ನಂತರ ದೇಶದ ಪ್ರಧಾನಮಂತ್ರಿಯಾಗುವುದು ಶತಃಸಿದ್ಧ ಎಂದು ಬಿ.ಎಸ.ಪಿ. ಮುಖಂಡ ಎಂ.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ತಾಲ್ಲೂಕಿನ ಹಾರೋಹಳ್ಳಿ ಮತ್ತು ಮರಳವಾಡಿಯ ಬಹುಜನ ಸಮಾಜ ಪಕ್ಷದ ವತಿಯಿಂದ ಬಿಎಸ್‍ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು , ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಹಿಂದುಳಿದ ಮತ್ತು ಬಡಸಮುದಾಯಗಳ ವೋಟುಗಳನ್ನು ಖರೀದಿಮಾಡಿ ದೇಶವಾಳಲು ಪ್ರಯತ್ನಿಸುತ್ತಾರೆ.

ಆದರೆ ಬಿಎಸ್‍ಪಿ ಮತದಾರ ಮತ್ತು ಕಾರ್ಯಕರ್ತರ ಜಾಲವನ್ನು ವಿಸ್ತರಣೆ ಮಾಡಿ ಜಾಗೃತಿ ಮೂಲಕ ಕೆಳಸಮುದಾಯದವರ ಏಳಿಗೆಗೆ ದುಡಿಯುತ್ತಿರುವ ಏಕೈಕ ಪಕ್ಷವಾಗಿದ್ದು ಈ ನಿಟ್ಟಿನಲ್ಲಿ ಜನಮನ್ನಣೆ ಗಳಿಸುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ನೀಲಿರಮೇಶ್ ಮಾತನಾಡಿ, ಈಗಾಗಲೇ ಮಾಯಾವತಿಯವರು ಮುಖ್ಯಮಂತ್ರಿಯಾಗಿ ಉತ್ತಮ ಸರಕಾರವನ್ನು ನಡೆಸುವ ಮೂಲಕ ಹಿಂದುಳಿದ ಜನಾಂಗದವರ ಮನಗೆದ್ದಿದ್ದಾರೆ ಎಂದರು.ಮುಖಂಡರಾದ ಮರಿಯಪ್ಪ, ಸಾತನೂರು ಶಿವಮಾದು, ಮೆಳೇಕೋಟೆ ಕೃಷ್ಣಪ್ಪ, ಮೇಡನಹಳ್ಳಿ ಹರೀಶ್, ಮೇಡಮಾರನಹಳ್ಳಿ ನಂದೀಶ್, ಹೇಮಂತ್, ಅಜ್ಜೇಗೌಡನವಲಸೆ ಅಶ್ವಥ್ ಹಲವರು ಉಪಸ್ಥಿತರಿದ್ದರು.

Facebook Comments