ಮೇಘಾಲಯ ಕಲ್ಲಿದ್ದಲು ಗಣಿ ದುರಂತ : 15 ಕಾರ್ಮಿಕರಲ್ಲಿ ಒಬ್ಬರ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Meghalaya mineನವದೆಹಲಿ, ಜ.17 (ಪಿಟಿಐ)- ಈಶಾನ್ಯ ರಾಜ್ಯ ಮೇಘಾಲಯದ ಜೈನ್‍ಟಿಯಾ ಪರ್ವತ ಜಿಲ್ಲೆಯ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿರುವ 15 ಕಾರ್ಮಿಕರಲ್ಲಿ ಒಬ್ಬರ ಶವ ವನ್ನು ನೌಕಾಪಡೆ ಯೋಧರ ತಂಡ ಪತ್ತೆ ಮಾಡಿದೆ. ಉಳಿದ 14 ಗಣಿ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣಿಸಿದೆ.

ನೌಕಾಪಡೆಯ ಮುಳುಗು ತಜ್ಞರು ಗಣಿ ಪ್ರವಾಹದ ನೀರಿನೊಳಗೆ ಮುಳುಗಿ 210 ಅಡಿಗಳಷ್ಟು ಆಳದಿಂದ ಒಬ್ಬ ಕಾರ್ಮಿಕನ ಮೃತದೇಹ ಪತ್ತೆ ಮಾಡಿ ಅದನ್ನು ಹೊರಕ್ಕೆ ತಂದಿದ್ದಾರೆ ಎಂದು ನೌಕಾಪಡೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.  ಕಾರ್ಮಿಕನ ಮೃತದೇಹ ಪತ್ತೆಯೊಂದಿಗೆ ಉಳಿದ 14 ಮಂದಿ ಶೋಧ ಕಾರ್ಯ ಮುಂದುವರಿದಿದ್ದು ಅವರೆಲ್ಲೂ ಸಾವಿಗೀಡಾಗಿರುವ ಶಂಕೆ ಬಲವಾಗಿದೆ.

Facebook Comments