ಬಿಜೆಡಿ ಸೇರಿದ ನಬಾ ಕಿಶೋರ್ ದಾಸ್, ಒಡಿಶಾದಲ್ಲಿ ಕಾಂಗ್ರೆಸ್’ಗೆ ಭಾರೀ ಹಿನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

Kishor-Das

ಭುವನೇಶ್ವರ್, ಜ.17- ಲೋಕಸಭಾ ಸಮರದೊಂದಿಗೆ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಒಡಿಶಾದಲ್ಲಿ ಪ್ರತಿಪಕ್ಷ ಕಾಂಗ್ರೆಸ್‍ಗೆ ಭಾರೀ ಹಿನ್ನಡೆಯಾಗಿದೆ. ಒಡಿಶಾ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿದ್ದ ನಬಾ ಕಿಶೋರ್ ದಾಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಇದರಿಂದ ಪಕ್ಷಕ್ಕೆ ಚುನಾವಣೆಗೆ ಮುನ್ನವೇ ಪ್ರಬಲ ಹೊಡೆತ ಬಿದ್ದಂತಾಗಿದೆ.

ಜ.25ರಂದು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ರಾಜೀನಾಮೆ ಪತ್ರ ಬರೆದಿರುವ ದಾಸ್ ಅವರು ಶಾಸಕ ಸ್ಥಾನಕ್ಕೆ ಇನ್ನೂ ರಾಜೀನಾಮೆ ನೀಡಿಲ್ಲ.

ನನ್ನ ಕ್ಷೇತ್ರದ ಜನರು ಹಾಗೂ ಮತದಾರರು ತಾನು ಬಿಜೆಡಿ (ಬಿಜು ಜನತಾದಳ)ಯಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಯಸುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ದಾಸ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ನನ್ನ ಈ ಕ್ರಮಕ್ಕೆ ಕ್ಷಮೆಯಿರಲಿ. ಆದರೆ, ಅಭಿವೃದ್ಧಿ ಮೊದಲು ಎಂಬ ಗುರಿ ಹೊಂದಿರುವುದರಿಂದ ಬಿಜೆಡಿಗೆ ಸೇರಬೇಕಿದ್ದು, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜತೆಗೂ ಕೈಜೋಡಿಸಬೇಕಿದೆ ಎಂದು ಕಾಂಗ್ರೆಸ್ ಶಾಸಕ ನಬಾ ಕಿಶೋರ್ ದಾಸ್ ರಾಹುಲ್ ಗಾಂಧಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin