ರಾಜಸ್ತಾನದಲ್ಲಿ ಹಂದಿ ಜ್ವರಕ್ಕೆ 16 ದಿನಗಳಲ್ಲಿ 39 ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

swine fluಜೈಪುರ್, ಜ.17 (ಪಿಟಿಐ)- ದೇಶದ ವಿವಿಧ ರಾಜ್ಯಗಳಲ್ಲಿ ಮಾರಕ ಹಂದಿ ಜ್ವರ(ಎಚ್1ಎನ್1 ಅಥವಾ ಸ್ವೆ ನ್ ಫ್ಲೂ) ಉಲ್ಬಣಗೊಂಡು ಆತಂಕದ ವಾತಾವರಣ ಸೃಷ್ಟಿಯಾಗಿರುವಾಗಲೇ, ರಾಜಸ್ತಾನದಲ್ಲಿ ಈ ಕಾಯಿಲೆಗೆ 16 ದಿನಗಳಲ್ಲಿ 39 ಮಂದಿ ಬಲಿಯಾಗಿದ್ದಾರೆ.

ಹೊಸ ವರ್ಷದ ಆರಂಭದಿಂದ ಜ.16ರವರೆಗೆ ರಾಜಸ್ತಾನದ ವಿವಿಧ ರಾಜ್ಯಗಳಲ್ಲಿ 971 ಹಂದಿ ಜ್ವರ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 39 ಮಂದಿಯನ್ನು ಈ ರೋಗ ಬಲಿ ಪಡೆದಿದೆ.

ಜೈಪುರ್, ಬರ್ಮೆರ್, ಜೋಧ್‍ಪುರ್, ಸಿಖರ್, ಕೋಟಾ, ನಾಗೌರ್, ಅಲ್ವಾರ್, ಉದಯ್‍ಪುರ್, ಅಜ್ಮೀರ್, ಗಂಗಾನಗರ್, ಪಲಿ, ಜೈಸಲ್ಮೇರ್ ಮತ್ತು ಪ್ರತಾಪ್‍ಗಢ್ ಜಿಲ್ಲೆಗಳಲ್ಲಿ ಈ ರೋಗ ಉಲ್ಬಣಗೊಂಡಿರುವುದು ಆತಂಕದ ಸಂಗತಿಯಾಗಿದೆ.

ಜನವರಿ 1ರಿಂದ 4,091 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ನಿನ್ನೆಯೇ ಈ ಜಿಲ್ಲೆಗಳಲ್ಲಿ 66 ಎಚ್1ಎನ್1 ಪ್ರಕರಣಗಳು ಪತ್ತೆಯಾಗಿವೆ.
ರೋಗ ಹರಡದಂತೆ ಸೂಕ್ತ ಮುನ್ನೆಚ್ಚರಿಕೆ ಮತ್ತು ಸೋಂಕು ಪೀಡಿತರಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಮತ್ತು ಆರೋಗ್ಯ ಸಚಿವ ಡಾ. ರಘು ಶರ್ಮ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.

Facebook Comments